ಕುಂದಾಪುರ : ಹನಿಮೂನ್ ಬದಲು ಸಮುದ್ರ ಕಿನಾರೆ ಸ್ವಚ್ಚ ಮಾಡಿದ ನವದಂಪತಿಗಳನ್ನು ಹೊಗಳಿದ ಪ್ರಧಾನಿ

ಕುಂದಾಪುರ : ಹನಿಮೂನ್ ಬದಲು ಸಮುದ್ರವನ್ನು ಸ್ವಚ್ಚಗೊಳಿಸೋ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದ ಕುಂದಾಪುರ ದ ನವದಂಪತಿಗಳ ಕಾರ್ಯ ಇದೀಗ ಪ್ರಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ವಿನುಷಾ ಮದುವೆಯಾಗಿದ್ದರು. ಮದುವೆಯಾದ ದಂಪತಿಗಳು ಸಾಮಾನ್ಯ ವಾಗಿ ಹನಿಮೂನ್ ಗೆ ಹೋಗೋದು ಮಾಮೂಲು. ಆದ್ರೆ ಅನುದೀಪ್ ಮತ್ತು ವಿನುಷಾ ದಂಪತಿ ಹನಿಮೂನ್ ಗೆ ಹೋಗುವ ಬದಲು ಸೋಮೇಶ್ವರ ಬೀಚ್ ನ್ನು ಸ್ವಚ್ಚಗೊಳಿಸಿದ್ದರು. ತಮ್ಮ ಮನೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಸೋಮೇಶ್ವರ ಬೀಚ್ ಗೆ ತಮ್ಮ ಸ್ನೇಹಿತರ ಸಹಕಾರದಿಂದ ಸಮುದ್ರ ತೀರವನ್ನು ಸ್ವಚ್ಚಗೊಳಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದರು.

31 ವರ್ಷದ ಅನುದೀಪ್ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗಿಯಾಗಿದ್ದಾರೆ. ಸುಮಾರು 10 ದಿನಗಳ ಕಾಲ ಸಮುದ್ರ ತೀರವನ್ನು ಸ್ವಚ್ಚಗೊಳಿಸಿದ್ದು ಬರೋಬ್ಬರಿ 6 ಕ್ವಿಂಟಾಲ್ ಗೂ ಅಧಿಕ ತ್ಯಾಜ್ಯವನ್ನು ಸಂಗ್ರಹಿಸಿದ್ದರು. ಮದುವೆಗೂ ಮೊದಲು ಲಕ್ಷದ್ವೀಪ ಅಥವಾ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅದು ಅಸಾಧ್ಯವಾಗಿತ್ತು.

ಸೋಮೇಶ್ವರ ಸಮುದ್ರ ಕಿನಾರೆಯ ಉದ್ದಕ್ಕೂ ಮದ್ಯದ ಬಾಟಲಿಗಳು, ಕಸ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಚಪ್ಪಲಿಯ ರಾಶಿ ಬಿದ್ದುಕೊಂಡಿತ್ತು. ಇದನ್ನು ಕಂಡ ದಂಪತಿ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಚಗೊಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ನೆವೆಂಬರ್ 27ರಿಂದ ಡಿಸೆಂಬರ್ 5ರವರೆಗೆ ಈ ದಂಪತಿ ಸೋಮೇಶ್ವರ ಬೀಚ್ ತೀರದಿಂದ ಹೊರತೆಗೆದಿದ್ದಾರಂತೆ. ದಂಪತಿಗಳ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಅನುದೀಪ್ ಹಾಗೂ ವಿನುಷಾ ದಂಪತಿಗಳ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಗೂ ಪಾತ್ರವಾಗಿದೆ. ಪ್ರಧಾನಿಗಳು ದಂಪತಿಗಳ ಕಾರ್ಯವನ್ನು ಗುರುತಿಸಿ ಮನ್ ಕಿ ಬಾತ್ ನಲ್ಲಿ ಇಂದಿನ ಯುವ ಪೀಳಿಗೆಗೆ ದಂಪತಿ ದಾರಿದೀಪ ಎಂದಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿಗಳು ತಮ್ಮ ಕಾರ್ಯವನ್ನು ಗುರುತಿಸಿರುವುದಕ್ಕೆ ಅನುದೀಪ್ ಹಾಗೂ ವಿನುಷಾ ದಂಪತಿ ಸಖತ್ ಖುಷಿಯಾಗಿ ದ್ದಾರೆ. ಮಾದರಿ ಕಾರ್ಯವನ್ನು ಮಾಡಿ ಪ್ರಧಾನಿಗಳ ಮೆಚ್ಚುಗೆಗೆ ಪಾತ್ರವಾಗಿರುವ ದಂಪತಿಗಳ ಕಾರ್ಯಕ್ಕೆ ಇದೀಗ ಹುಟ್ಟೂರಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

https://kannada.newsnext.live/karnataka-udupi-newcouple-newstep-seecleening/

Comments are closed.