ಅರೆಬರೆ ಬಟ್ಟೆಯಲ್ಲಿ ವೆಡ್ಡಿಂಗ್ ಪೋಟೋಶೂಟ್…! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಟೋಸ್…!!

ಇತ್ತೀಚಿಗೆ ವೆಡ್ಡಿಂಗ್ ಪೋಟೋಶೂಟ್ ಟ್ರೆಂಡ್ ಜೋರಾಗಿದೆ. ನದಿಯಲ್ಲಿ, ಹೂತೋಟದಲ್ಲಿ, ಗುಡ್ಡದ ಮೇಲೆ, ಸಮುದ್ರದಲ್ಲಿ, ಕೋಟೆಯಲ್ಲಿ ಹೀಗೆ ಎಲ್ಲೆಲ್ಲೋ ಯುವಜೋಡಿಗಳು ತಮ್ಮ ಕನಸುಗಳ ಪಿಸುಮಾತು ಹಂಚಿಕೊಳ್ಳುತ್ತ ಪೋಟೋಗೆ ಪೋಸ್ ಕೊಡ್ತಾರೆ. ಆದರೆ ಇಲ್ಲೊಂದು ಪೋಟೋಶೂಟ್ ಮಾತ್ರ ಯಾವುದೋ ಹಸಿ-ಬಿಸಿ ಸಿನಿಮಾ ಶೂಟ್ ನಂತೆ ಮೂಡಿಬಂದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ವೆಡ್ಡಿಂಗ್ ಪೋಟೋಶೂಟ್ ಅಂದ್ರೇ ಟ್ರೆಡಿಶನಲ್ ಔಟ್ ಫಿಟ್ ಅಥವಾ ಮಾಡರ್ನ್ ಡ್ರೆಸ್ ನಲ್ಲಿ ಜೋಡಿಗಳು ಪೋಟೋಕ್ಕೆ ಪೋಸ್ ನೀಡ್ತಾರೆ. ಆದರೆ ಇಲ್ಲೊಂದು ಜೋಡಿ ಮಾತ್ರ ಅರೆ-ಬರೆ ಬಟ್ಟೆಯಲ್ಲಿ, ಬೆಡ್ ಶೀಟ್ ಹೋಲುವ ವಸ್ತ್ರ ಸುತ್ತಿಕೊಂಡು ಫುಲ್ ರೋಮ್ಯಾಂಟಿಕ್ ಆಗಿ ಪೋಸ್ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಫಿತೋಟದಲ್ಲಿ ಆಗಷ್ಟೇ ಬೆಡ್ ರೂಂನಿಂದ ಎದ್ದು ಬಂದಂತೆ ಜೋಡಿ ಕಾಣಿಸಿಕೊಂಡಿದ್ದು, ಪೋಟೋದಲ್ಲಿರುವ ಹುಡುಗಿ ಬಿಳಿಬೆಡ್ ಶೀಟ್ ಮಾನ-ಮರ್ಯಾದೆ ಮುಚ್ಚಿಕೊಳ್ಳುವಂತೆ ಪೋಸು ನೀಡಿ ಸಭ್ಯಸ್ಥರು ಪೋಟೋ ನೋಡೋಕಾಗದೇ ಕಣ್ಣು ಮುಚ್ಚಿಕೊಳ್ಳುವಂತೆ ಮಾಡಿದ್ದಾಳೆ.

ಇನ್ನು ಕೆಲ ಪೋಟೋಗಳಲ್ಲಿ ಅತಿರೇಕ ಎನ್ನಿಸುವಂತ ಪೋಸ್ ಗಳಲ್ಲಿ ಪೋಟೋ ತೆಗೆಸಿಕೊಂಡಿದ್ದು, ಜನರು ಥೂ ಇವೆಲ್ಲ ಬೇಕಾ ಅಂತ ಮೂಗು ಮುರಿತಿದ್ದಾರೆ. ಈ ಜೋಡಿ ಕೇರಳದಲ್ಲಿ ಪೋಟೋ ಶೂಟ್ ಮಾಡಿಸಿದಂತಿದೆ. ಆದರೆ ಈ ಜೋಡಿಯ ಬಗ್ಗೆ ಯಾವುದೇ ಡಿಟೇಲ್ಸ್ ಸಿಕ್ಕಿಲ್ಲ.

ಇನ್ನು ಈ ಹಾಟ್ ಹಾಟ್ ಪೋಟೋಶೂಟ್ ನ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಹಾಗೂ ಟ್ರೋಲ್ ಪೇಜ್ ಗಳು ಮನಬಂದಂತೆ ಕಮೆಂಟ್ ಮಾಡುತ್ತ ಎಂಜಾಯ್ ಮಾಡ್ತಿವೆ.

ಇನ್ನು ಕೆಲವರು ಇವೆಲ್ಲ ಬೇಕಾ…? ಹಿಂಗೆ ಮುಂದುವರೆದ್ರೇ ಸಿನಿಮಾಗಳಂತೆ ವೆಡ್ಡಿಂಗ್ ಪೋಟೋಶೂಟ್ ಗೂ ಸೆನ್ಸಾರ್ ಅಳವಡಿಸೋ  ಅಗತ್ಯ ಬರಬಹುದು ಅಂತ ವ್ಯಂಗ್ಯವಾಡ್ತಿದ್ದಾರೆ. ಎಲ್ಲವೂ ಇತಿ-ಮಿತಿಯಲ್ಲಿದ್ದರೇ ಚೆಂದ. ಆದರೆ ಇಂಥ ಪೋಟೋಶೂಟ್ ನೋಡಿದ ಮೇಲೆ ಜನ ಮರುಳೋ ಜಾತ್ರೆ ಮರುಳೋ ಎನ್ನಿಸಿದ್ದು ಸುಳ್ಳಲ್ಲ.

Comments are closed.