ಎಣ್ಣೆ ಸಿಗದ ಕುಡುಕರಿಗೆ ಗುಡ್ ನ್ಯೂಸ್ ! : MRP, MSIL ಅಂಗಡಿ ಆಗುತ್ತಾ ಓಪನ್ ?

0

ಬೆಂಗಳೂರು : ಎಣ್ಣೆ ಸಿಗದೆ ಕಂಗಾಲಾಗಿರೋ ಮದ್ಯ ಪ್ರಿಯರಿಗೆ ಸರಕಾರ ಗುಡ್ ನ್ಯೂಸ್ ನೀಡಲು ಚಿಂತನೆ ನಡೆದಿದೆ. ಸೀಮಿತ ಅವಧಿಯವರೆಗೆ ಷರತ್ತು ಬದ್ದವಾಗಿ ಮದ್ಯದಂಗಡಿ ತೆರೆಯಲು ಹಣಕಾಸು ಇಲಾಖೆ ಅಬಕಾರಿ ಇಲಾಖೆಯ ಸಲಹೆ ಕೇಳಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಎಂಆರ್ ಪಿ ಹಾಗೂ ಎಂಎಸ್ ಐಎಲ್ ಅಂಗಡಿಗಳು ಓಪನ್ ಆಗೋದು ಗ್ಯಾರಂಟಿ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಮದ್ಯ ಸಿಗದೇ ಕುಡುಕರು ಕಂಗಲಾಗಿದ್ದಾರೆ. ಎಣ್ಣೆ ಸಿಗದೆ ರಾಜ್ಯದಲ್ಲಿ 24 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಲ್ಲಿ ಕದ್ದುಮುಚ್ಚಿ ಎಣ್ಣೆ ಮಾರಾಟವೂ ನಡೆಯುತ್ತಿದೆ. ಎಣ್ಣೆ ಸಿಗದೆ ಹಲವು ಕಡೆ ಮದ್ಯಪ್ರಿಯರು ಬಾರ್ ಗಳಿಗೆ ಕನ್ನ ಹಾಕಿದ್ದಾರೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವಂತೆ ಕುಡುಕರು ಸರಕಾರದ ಮೇಲಯೂ ಒತ್ತಡ ಹೇರಿದ್ದಾರೆ. ಇದರ ಬೆನ್ನಲ್ಲೇ ಹಣಕಾಸು ಇಲಾಖೆ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿದೆ. ಷರತ್ತುಬದ್ದವಾಗಿ ಸೀಮಿತ ಅವಧಿಯವರೆಗೆ ಎಂಆರ್ ಪಿಎಲ್ ಹಾಗೂ ಎಂಎಸ್ ಐಎಲ್ ಮದ್ಯದಂಗಡಿಗಳನ್ನು ತೆರೆಯಲು ಚಿಂತಿಸಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಈ ಕುರಿತು ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಸಲಹೆ ಕೇಳಿರೋ ಹಣಕಾಸು ಇಲಾಖೆ ಕುಡುಕರಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಕೇರಳದಲ್ಲಿ ಈಗಾಗಲೇ ಷರತ್ತು ಬದ್ದವಾಗಿ ಮದ್ಯ ಮಾರಾಟಕ್ಕೆ ಅನುಮತಿಯನ್ನು ನೀಡಿದೆ. ಅದೇ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಆರಂಭಿಸಲು ಚಿಂತನೆ ನಡೆದಿದೆ. ಅಲ್ಲದೇ ರಾಜ್ಯದ ಬೊಕ್ಕಸಕ್ಕೂ ಕೂಡ ಆದಾಯ ಲಭಿಸೋ ಹಿನ್ನೆಲೆಯಲ್ಲಿ ಹಣಕಾಸು ಈ ಕ್ರಮಕ್ಕೆ ಮುಂದಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಒಪ್ಪಿಗೆ ನೀಡಿದ್ದೇ ಆದ್ರೆ ಮದ್ಯದಂಗಡಿಗಳು ಓಪನ್ ಆಗಲಿವೆ.

Leave A Reply

Your email address will not be published.