File Income Tax Returns : ITR ಅನ್ನು ಆನ್‌ಲೈನ್‌ ನಲ್ಲಿ ಫೈಲ್‌ ಮಾಡಿ, ದಂಡದಿಂದ ತಪ್ಪಿಸಿಕೊಳ್ಳಿ!

2021-2022 ನೇ ಸಾಲಿನ ಹಣಕಾಸು ವರ್ಷದಲ್ಲಿ (Financial Year) ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ (File Income Tax Returns) ಮಾಡಲು ಜುಲೈ 31 ಕೊನೆಯ ದಿನವಾಗಿದೆ. ಇದರ ಅರ್ಥ ತೆರಿಗೆ ಪಾವತಿಸಲು ಇನ್ನು ಎರಡು ವಾರಗಳು ಉಳಿದಿವೆ. ಈ ಗಡುವನ್ನು ಮೀರಿದರೆ ವಿಳಂಬ ಶುಲ್ಕ ರೂ. 5,000 ಗಳ ವರೆಗೂ ಪಾವತಿಸಬೇಕಾಗಬಹುದು. ಅದಕ್ಕಾಗಿಯೇ ತೆರಿಗೆದಾರರು ರಿಟರ್ನ್ಸ್‌ ಫೈಲ್‌ ಮಾಡುವ ಅಗತ್ಯವಿದೆ.

ಆದಾಯ ತೆರಿಗೆ ರಿಟರ್ನ್ಸ್‌ ಅನ್ನು ಆನ್‌ಲೈನ್‌ ಮುಖಾಂತರವೂ ಪಾವತಿಸಿಬಹುದು. ಆದಾಯ ತೆರಿಗೆ ರಿಟರ್ನ್ಸ್‌ ಪಾವತಿಸಲು ತೆರಿಗೆದಾರರಿಗೆ ಕೆಲವು ದಾಖಲೆಗಳ ಅವಶ್ಯಕತೆ ಇರುತ್ತದೆ. ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ವೋಟರ್‌ ಐಡಿ ಕಾರ್ಡ್‌ ಮತ್ತು ಬ್ಯಾಂಕ್‌ ಪಾಸ್‌ಬುಕ್‌ಗಳು ಆನ್‌ಲೈನ್‌ ನಲ್ಲಿ ಆದಾಯ ತೆರಿಗೆ ಪಾವತಿಸಲು ಅಗತ್ಯವಿರುವ ದಾಖಲೆಗಳು.

ಆನ್‌ಲೈನ್‌ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡುವುದು ಹೇಗೆ?

  1. ಇನ್‌ಕಮ್‌ ಟ್ಯಾಕ್ಸ್ ಫೈಲ್‌ ಮಾಡಲು e-filing ವೆಬ್‌ಸೈಟ್‌ ಗೆ ಹೋಗಿ.
  2. ನೀವು ಈ ಮೊದಲೇ ರಿಜಸ್ಟರ್‌ ಮಾಡಿದ್ದರೆ ಲಾಗ್‌ಇನ್‌ ಆಗಿ. ಇಲ್ಲವೇ ರಿಜಿಸ್ಟರ್‌ ಯುವರ್‌ಸೆಲ್ಫ್‌ ಕ್ಲಿಕ್ಕಿಸಿ.
  3. ಫೈಲ್‌ ಇನ್‌ಕಮ್‌ ಟ್ಯಾಕ್ಸ್‌ ಕ್ಲಿಕ್ಕಿಸಿ.
  4. ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡಲು ಅಗತ್ಯವಿರುವ ಮಾಹಿತಿ ಒದಗಿಸಿ.
  5. ಮೌಲ್ಯಮಾಪನ ವರ್ಷ (assessment year) FY2021–22 ಆಯ್ದುಕೊಳ್ಳಿ.
  6. ಎಲ್ಲಾ ಮಾಹಿತಿ ಒದಗಿಸಿದ ನಂತರ ಮತ್ತೊಮ್ಮೆ ಪರಿಶೀಲಿಸಿ.
  7. ನಂತರ ‘Preview and Submit’ ಕ್ಲಿಕ್ಕಿಸಿ.
  8. ITR ಅನ್ನು ಅಪ್‌ಲೋಡ್‌ ಮಾಡಲಾಗುವದು ಮತ್ತು ಬ್ಯಾಂಕ್‌ ಖಾತೆಯ ವಿವಿರಗಳ ಮೂಲಕ ಆಧಾರ್‌ OTP, EVC ಒದಗಿಸಿ, ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಬೇಕು.
  9. ಫೈನಲ್‌ ಸಬ್ಮಿಶನ್‌ಗಾಗಿ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಕಳುಹಿಸಿದ OTP/EVC ಒದಗಿಸಿ.
  10. ಈಗ ಆದಾಯ ತೆರಿಗೆ ಇಲಾಖೆಯು ನೀವು ಫೈಲ್‌ ಮಾಡಿದ ರಿಟರ್ನ್ಸ್‌ ಅನ್ನು ಪ್ರಕ್ರಿಯೆಗೊಳಿಸುವುದು. ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಅಥವಾ email ಗೆ ಸಂದೇಶ ಕಳುಹಿಸುವುದರ ಮೂಲಕ ನಿಮಗೆ ತಿಳಿಯಪಡಿಸುವುದು.

ಇದನ್ನೂ ಓದಿ : IT Returns Filing: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಇದೇ ಜುಲೈ 31 ಕೊನೆಯ ದಿನ!!

ಇದನ್ನೂ ಓದಿ : LIC Policy : ಎಲ್‌ಐಸಿ ಯ ವಿಮಾ ಬಚತ್‌ ಪಾಲಿಸಿ ನಿಮಗೆ ಗೊತ್ತಾ? ಒಂದೇ ಸಲ ಪ್ರೀಮಿಯಂ ಪಾವತಿಸಿ ಹೆಚ್ಚಿನ ಲಾಭ ಗಳಿಸಬಹುದು!!

(File Income Tax Returns in online here is a step-by-step guide)

Comments are closed.