ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಬೆಳಕಿಗೆ ತಂದಿದ್ದು, ಚಾಮರಾಜನಗರ ದುರಂತ ಮರೆಮಾಚೋ ಪ್ರಯತ್ನ ಎಂದ ಮಾಜಿಸಿಎಂ…!!

ಮಂಡ್ಯ: ಬೆಂಗಳೂರಿನ ಬಿಬಿಎಂಪಿಯಲ್ಲಿ ನಡೆದ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆಯುವ ಮೂಲಕ  ಚಾಮರಾಜನಗರ ದುರಂತವನ್ನು ಮರೆಮಾಚೋ ಪ್ರಯತ್ನ ನಡೆದಿದೆ ಎಂದು ಮಾಜಿಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಆ ಮೂಲಕ ಜನರನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಸರ್ಕಾರ ಎಂದು ಎಚ್ಡಿಕೆ ಟೀಕಿಸಿದ್ದಾರೆ.

ಮಂಡ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳ ಮಾಹಿತಿ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ನಿನ್ನೆ ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ನಾಟಕ ಮಾಡಿದ್ದಾರೆ. ವಾರ್ ರೂಂಗೆ ತೆರಳಿ ಅಗ್ಗದ ಪ್ರಚಾರ ಪಡೆಯಲು ಯತ್ನಿಸಿದ್ದಾರೆ. ವಾರ್ ರೂಂನ್ನು ಮದರಸಾ ಮಾಡುತ್ತೀದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇಲ್ಲಿ ಜಾತಿ ಮುಖ್ಯವಲ್ಲ. ಪ್ರಾಮಾಣಿಕತೆ ಮುಖ್ಯ. ಸರ್ಕಾರ ಆಕ್ಸಿಜನ್ ಬಗ್ಗೆ ಮೊದಲು ಜನರಿಗೆ ಸತ್ಯ ಹೇಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಂಸದರು ಒಂದು ವಾರ್ ರೂಮ್ ಗೆ ಹೋಗಿ ನೋಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳನ್ನು ಜೈಲಿಗೆ ಹಾಕಿಸಿದ್ದಾರೆ. ಇದಷ್ಟೇ ಅವರ ಸಾಧನೆ. ಬೆಂಗಳೂರಿನ ಇನ್ನುಳಿದ ವಾರ್ ರೂಂಗಳ ಕತೆ ಏನು? ವಾರ್ ರೂಮ್ ನ ಕಂಪ್ಯೂಟರ್ ದಾಖಲೆ ನೋಡಿ ಏನು ಮಾಡುತ್ತೀರಿ? ಆಸ್ಪತ್ರೆಗೆ ತೆರಳಿ ಆಕ್ಸಿಜನ್ ಹಾಗೂ ಮೆಡಿಸಿನ ಪರಿಸ್ಥಿತಿ ಪರಿಶೀಲಿಸಿ. ಚಾಮರಾಜನಗರ ಪ್ರಕರಣ ಏನಾಯ್ತು ಜನರಿಗೆ ಉತ್ತರಿಸಿ. ಅದನ್ನು ಬಿಟ್ಟು ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.

https://kannada.newsnext.live/education/june-15-school-start-sslc-exams-mew-guidlin

ವಾರ್ ರೂಂನಲ್ಲಿ ಕೆಲಸ ಮಾಡುವ ಕೆಲವರು ಏಜೆನ್ಸಿ ನಡೆಸುತ್ತಿದ್ದರು ಎನ್ನಲಾಗುತ್ತಿದೆ. ಅವರಿಗೆ ಬೆಡ್ ಬ್ಲಾಕಿಂಗ್ ಕೆಲಸ ಕೊಟ್ಟಿದ್ದು ಯಾರು?ಕೆಲಸ ಕೊಡುವಾಗ ನೀವು ಅವರಿಂದ ದುಡ್ಡು ಪಡೆದಿದ್ದೀರಿ. ಈಗ ಅದೇ ದುಡ್ಡನ್ನು ಅವರು ಅಲ್ಲಿ ವಸೂಲಿ ಮಾಡುತ್ತಿದ್ದಾರೆ.  ಕೊರೋನಾದಂತಹ ಕಾಲದಲ್ಲಿ ಜಾತಿರಾಜಕಾರಣ ಬೇಡ. ಹುಡುಗಾಟ ಆಡಬೇಡಿ.ಸರಿಯಾಗಿ ಸರ್ಕಾರ ನಡೆಸಿ ಎಂದು ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಮಾಜಿಸಿಎಂ ಸಿದ್ಧರಾಮಯ್ಯ ಕೂಡ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ಮಾಡಿದ್ದು, ತೇಜಸ್ವಿ ತಮ್ಮ ತಲೆಯಲ್ಲಿರುವ ಧರ್ಮದ ವೈರಸ್ ಗೆ ಚಿಕಿತ್ಸೆ ಪಡೆಯಲಿ ಎಂದಿದ್ದಾರೆ.

Comments are closed.