ಪವಿತ್ರವಾಯ್ತು ಗಂಗಾ, ಯಮುನಾ : ಲಾಕ್ ಡೌನ್ ನಿಂದ ನದಿಗಳು ಪುಲ್ ಕ್ಲೀನ್ !

0

ವಾರಾಣಸಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ.‌ ಕೊರೊನಾ ಭೀತಿಯಿಂದಾಗಿ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಕಾರ್ಖಾನೆಗಳೆಲ್ಲವೂ ಸ್ತಬ್ದವಾಗಿದೆ. ಹೀಗಾಗಿ ದೇಶದ ಪವಿತ್ರ ನದಿಯಾಗಿರೋ ಗಂಗೆ ಮತ್ತು ಯಮುನಾ ನದಿಗಳು ಸ್ವಚ್ಚವಾಗಿ ಹರಿಯುತ್ತಿವೆ.

ಗಂಗಾ ನದಿಯನ್ನು ದೇಶದ ಪವಿತ್ರ ನದಿಯೆಂದು ಪೂಜಿಸಲಾಗುತ್ತಿದೆ. ಆದ್ರೆ ನಾನಾ ಕಾರಣಗಳಿಂದಾಗಿ ಗಂಗೆ ಕೆಲ ದಶಗಳಿಂದಲೂ ಮಾಲಿನ್ಯದ ಗೂಡಾಗಿದ್ದಳು. ಗಂಗಾ ನದಿಯಲ್ಲಿ ಮಿಂದೇಳುವುದು ಪವಿತ್ರವೆಂಬ ಭಾವನೆಯಿದ್ದರೂ, ಮಾಲಿನ್ಯದಿಂದಾಗಿ ನದಿಯಲ್ಲಿ ಸ್ನಾನ ಮಾಡುವುದು ಯೋಗ್ಯವಲ್ಲಾ ಅಂತಾ ಹೇಳಲಾಗುತ್ತಿತ್ತು.

ಕೇಂದ್ರ ಸರಕಾರ ಗಂಗಾ ಹಾಗೂ ಯಮುನಾ ನದಿಗಳ ಸ್ವಚ್ಚತೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೂ ಗಂಗಾ ನದಿ ತನ್ನ ಹಿಂದಿನ ವೈಭವಕ್ಕೆ ಮರಳಿರಲಿಲ್ಲ.

ಲಾಕ್ ಡೌನ್ ಹಿನ್ನೆಲೆ ನದಿ ಪಾತ್ರದಲ್ಲಿರುವ ಕಾರ್ಖಾನೆಗಳು ಮುಚ್ಚಿರುವುದರಿಂದ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಅಲ್ಲದೇ ಗಂಗೆಯಲ್ಲಿ ಸ್ನಾನ ಮಾಡುವವರು ನದಿಗೆ ಎಸೆದು ಮಲಿನ ಮಾಡುವ ಭಕ್ತರೂ ಇಲ್ಲ ಹೀಗಾಗಿ ಗಂಗೆ ಸ್ವಚ್ಛವಾಗಿ ಹರಿಯುತ್ತಿದೆ.

ಇತ್ತೀಚಿಗೆ ವರದಿಯೊಂದರ ಪ್ರಕಾರ ಮಾಲಿನ್ಯದ ಗೂಡಾಗಿ ಕುಡಿಯಕ್ಕೆ ಯೋಗ್ಯವಾಗದ ಗಂಗಾ ನದಿಯ ನೀರು ಇದೀಗ ಕುಡಿಯಲು ಯೋಗ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ಈ ಪ್ರದೇಶದಲ್ಲಿ ಮಳೆಯೂ ಸುರಿದಿರುವುದರಿಂದ ನದಿಯ ನೀರಿನ ಮಟ್ಟಹೆಚ್ಚಿದ್ದು, ಕೊಳೆ ತೊಳೆದುಕೊಂಡು ಹೋಗಿದೆ. ಈಗ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ನೀರನ್ನು ಪರೀಕ್ಷೆಗೊಳಪಡಿಸಿದ ವಿಜ್ಞಾನಿಗಳು ತಿಳಿಸಿದ್ದಾರೆ.

Leave A Reply

Your email address will not be published.