ಸಾಮಾನ್ಯವಾಗಿ ಅನಾರೋಗ್ಯಕ್ಕೆ ತುತ್ತಾದಾಗ ಹೆಚ್ಚಾಗಿ ಹಣ್ಣುಗಳನ್ನು ಸೇವನೆ ಮಾಡುತ್ತವೆ. ಆದ್ರೆ ಬಹುತೇಕ ಹಣ್ಣುಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಅದ್ರಲ್ಲೂ ವಿದೇಶಿ ಹಣ್ಣು ಅಂತಾನೇ ಕರೆಯಿಸಿಕೊಳ್ಳೋ ಕಿವಿ ಹಣ್ಣು ಬಹುತೇಕರ ಪ್ರಾಣವನ್ನೇ ಕಾಪಾಡಿದೆ.

ಹೆಚ್ಚಾಗಿ ಡೆಂಗ್ಯೂ ಕಾಣಿಸಿಕೊಂಡಾಗ ಹೆಚ್ಚಾಗಿ ಸೇವಿಸೋ ಕಿವಿ ಹಣ್ಣು, ನೋಡಲು ಸರಳವೆನಿಸಿದ್ರೂ ಖಜಿನಾಂಶ, ಜೀವಸತ್ವಗಳು ಹೇರಳ ಪ್ರಮಾಣದಲ್ಲಿ ಕವಿ ಹಣ್ಣಿನಲ್ಲಿದೆ. ಎಕ್ಟಿಂಡಿಯ ಡೆಲಿಸಿಯೊಸ ತಳಿಯ ಕಾಡು ಬಳ್ಳಿಯ ಜಾತಿಗೆ ಸೇರಿರೋ ಕಿವಿ ಹಣ್ಣನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ.

ಇಟಲಿ, ಚೀನಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಈ ಹಣ್ಣನ್ನು ಗೂಸ್ ಬೆರ್ರಿ ಅಂತಾ ಕರೆಯುತ್ತಿದ್ದರು, ಆದರೆ ನ್ಯೂಜಿಲೆಂಡ್ ನಲ್ಲಿ ಹೇರಳ ಪ್ರಮಾಣದಲ್ಲಿ ಕಿವಿ ಹಣ್ಣನ್ನು ಬೆಳೆಸಲಾಗುತ್ತಿದ್ದು, ಗೂಸ್ ಬೆರ್ರಿ ಹಣ್ಣನ್ನು ನಂತರದಲ್ಲಿ ಕಿವಿ ಹಣ್ಣು ಎಂದು ಕರೆಯಲಾಗುತ್ತಿದೆ.

ಕಿವಿ ಹಣ್ಣಿನ ಬಣ್ಣ ಮತ್ತು ವಿನ್ಯಾಸ ಬಹಳ ಆಕರ್ಷನೀಯವಾಗಿದೆ. ಅಷ್ಟೇ ಅಲ್ಲದೆ, ಕಿವಿ ಹಣ್ಣು ಇತರ ಹಣ್ಣುಗಳಲ್ಲಿರುವ ಅಂಶಗಳನ್ನು ಒಳಗೊಂಡಿದ್ದು, ಬಾಳೆಯ ಹಣ್ಣಿನ ಪೊಟ್ಯಾಶಿಯಂ, ಕಿತ್ತಳೆ ಹಣ್ಣಿನ ‘ಸಿ’ ಸತ್ವ, ಅವಕಾಡೋದ ‘ಈ’ ಸತ್ವ, ಹಸಿರು ತರಕಾರಿ, ಸೊಪ್ಪಿನಲ್ಲಿರುವ ತಾಮ್ರ ಸತ್ವ, ಮೆಗ್ನೇಶಿಯ, ಕ್ರೋಮಿಯಂ, ಜೀರ್ಣಕಾರಿ ನಾರಿನ ಅಂಶಗಳನ್ನು ಕಿವಿಹಣ್ಣು ಒಳಗೊಂಡಿದೆ.

ಕ್ಯಾನ್ಸರ್ ರೋಗವನ್ನು ತಡೆಯುವ ಆಂಟಿ ಆಕ್ಸಿಡಂಟ್ ಸತ್ವವೂ ಕಿವಿ ಹಣ್ಣನಲ್ಲಿದೆ. ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ಗಳ ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನ ಸೇವನೆಯಿಂದ ಡಿಎನ್ಎ ಉತ್ತಮಗೊಳಿಸಬಹುದು.

ಪ್ರಮುಖವಾಗಿ ಕಿವಿ ಹಣ್ಣು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಕಿವಿ ಹಣ್ಣು ತಿನ್ನುವುದರಿಂದ ರಕ್ತದ ಪ್ಲೇಟ್ ಲೆಟ್ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ. ಹೀಗಾಗಿ ಕಿವಿ ಹಣ್ಣು ತಿನ್ನುವುದರಿಂದ ಡೆಂಗ್ಯೂ ಮತ್ತು ಕಾಮಾಲೆಯ ರೋಗದಿಂದ ದೂರವಿರಬಹುದು.
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣವು ಹೇರಳವಾಗಿದ್ದು ಇದು ಜೀವಕೋಶಗಳು ನಿರ್ನಾಮವಾಗದಂತೆ ತಡೆಯುವುದರ ಜೊತೆಗೆ ದೇಹದ ಉರಿಯೂತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಇನ್ನು ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿಯೂ ಕಿವಿ ಹಣ್ಣು ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಿವಿಹಣ್ಣು ಮೈಕ್ಯುಲರ್ ಡಿಜೆನರೇಷನ್ ಸಮಸ್ಯೆಯನ್ನು ದೂರ ಮಾಡುತ್ತದೆ. ಹೀಗಾಗಿ ಭವಿಷ್ಯದಲ್ಲಿ ಎದುರಾಗುವ ದೃಷ್ಟಿ ದೋಷ ಸಮಸ್ಯೆಯಿಂದಲೂ ದೂರವಿರಬಹುದು.

ಕಿವಿ ಹಣ್ಣಿನಲ್ಲಿ 110 ಕ್ಯಾಲೊರಿಗಳಿದ್ದು, 2 ಗ್ರಾಂ ಪ್ರೋಟೀನ್ ಮತ್ತು 1ಗ್ರಾಂನಷ್ಟು ಕೊಬ್ಬು ಒಳಗೊಂಡಿರುತ್ತದೆ. ಪ್ರತಿನಿತ್ಯ ಕಿವಿ ಹಣ್ಣನ್ನು ತಿನ್ನುವುದರಿಂದ ಹೃದಯದ ಆರೋಗ್ಯ ವನ್ನೂ ವೃದ್ದಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಕಿವಿಹಣ್ಣು ಡೆಂಗ್ಯೂ ಬಂದಾಗ ಮಾತ್ರ ಸೇವನೆ ಮಾಡೋದಲ್ಲಾ, ಬದಲಾಗಿ ನಿತ್ಯವೂ ಸೇವೆನೆ ಮಾಡುವುದರಿಂದ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದಾಗಿದೆ.