ರಾಜ್ಯದ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆ : ರೆಡ್ ಅಲರ್ಟ್

0

ಬೆಂಗಳೂರು : ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ.ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಬಹುತೇಕ ಕಡೆ ಮುಂದಿನ ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್ 13 ರಂದು ಭಾರಿ ಮಳೆ ಸುರಿಯಲಿದೆ. ಇನ್ನುಳಿದಂತೆ ಉತ್ತರ ಒಳನಾಡಿನಾದ್ಯಂತ ಮಳೆಯಾಗಲಿದೆ.

ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಹೆಚ್ಚಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ನರಗುಂದ, ಮಹಾಲಿಂಗಪುರ, ಹುನಗುಂದ, ಹಾಸನ, ಧರ್ಮಸ್ಥಳ, ಸುಳ್ಯ, ಅಂಕೋಲಾ, ನಿಪ್ಪಾಣಿಯಲ್ಲಿ ಭಾರಿ ಮಳೆಯಾಗಿದೆ.

ಮೂಡಬಿದಿರೆ, ಕಾರ್ಕಳ, ಬಾಗಲಕೋಟೆ, ಕೊಪ್ಪಳ, ನೆಲಮಂಗಲ, ಬೆಂಗಳೂರು ಕೆಐಎಎಲ್, ಹೊಸದುರ್ಗ, ಗೋಕರ್ಣ, ಹೊನ್ನಾವರ, ಪಣಂಬೂರು, ಥೊಂಡೆಬಾವಿ, ಚಿಕ್ಕೋಡಿ, ಗೋಪಾಲನಗರ, ಮುಲ್ಕಿ, ಸಿದ್ದಾಪುರ, ಕುಡಚಿ, ಉಡುಪಿ, ಮುದ್ದೇಬಿಹಾಳ, ಗದಗ, ಎಚ್‌ಡಿ ಕೋಟೆ, ಟಿ ನಗರಸೀಪುರದಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

Leave A Reply

Your email address will not be published.