ಚಿಕ್ಕಬಳ್ಳಾಪುರ : ಮೆಕ್ಕಾ ಪ್ರವಾಸ ಮುಗಿಸಿ ಬಂದು ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ. 70 ವರ್ಷದ ಮಹಿಳೆ ಕಳೆದ 9 ದಿನಗಳಿಂದಲೂ ಹೋಮ್ ಕ್ವಾರಂಟೈನ್ ನಲ್ಲಿ ಇದ್ದಿದ್ದರು. ನಿನ್ನೆ ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ರಾಜೀವಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ವೃದ್ದೆ ಇತ್ತೀಚಿಗಷ್ಟೇ ಮೆಕ್ಕಾ ಯಾತ್ರೆಗೆ ತೆರಳಿ ವಾಪಾಸಾಗಿದ್ದರು. ಮಹಿಳೆಗೆ ಹೃದ್ರೋಹ ಹಾಗೂ ಬಿಪಿ ಸಮಸ್ಯೆಯಿತ್ತು. ಮಹಿಳೆಯ ಗಂಟಲಿನ ದ್ರವನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ. ವರದಿಯ ನಂತರವೇ ಕೊರೊನಾ ಸೋಂಕಿನಿಂದಲೇ ಮಹಿಳೆ ಸಾವನ್ನಪ್ಪಿದ್ದಾರೆಯೇ ಎಂಬ ಬಗ್ಗೆ ಖಚಿತವಾಗಲಿದೆ.
ಮಹಿಳೆ ಸಾವನ್ನಪ್ಪಿರೋ ಹಿನ್ನೆಲೆಯಲ್ಲಿ ವೃದ್ದ ಮಹಿಳೆಯ ಮನೆಯ ಸಮೀಪದ ನಿವಾಸಿಗಳಿಗೆ, ಸಂಬಂಧಿಕರಿಗೆ ಎಚ್ಚರಿಕೆಯಿಂದ ಇರಲು ಜಿಲ್ಲಾಧಿಕಾರಿ ಆಶಾ ಅವರು ಸೂಚನೆಯನ್ನು ನೀಡಿದೆ. ಒಂದೊಮ್ಮೆ ಮಹಿಳೆ ಕೊರೊನಾದಿಂದಲೇ ಸಾವನ್ನಪ್ಪಿದ್ದರೆ, ರಾಜ್ಯದಲ್ಲಿ ಕೊರೊನಾಕ್ಕೆ ಎರಡನೇ ಬಲಿಯಾಗಿದೆ. ಮಹಿಳೆಯ ಸಾವಿನಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವು : ಕೊರೊನಾಗೆ ರಾಜ್ಯದಲ್ಲಿ ಎರಡನೇ ಬಲಿ ?
- Advertisement -