163 ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ : ವ್ಯಕ್ತಿಯ ವಿರುದ್ದ ದಾಖಲಾಯ್ತು ಪ್ರಕರಣ

0

ಕುಂದಾಪುರ : ಕೊರೊನಾ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದವರಿಗೆ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನು ನೀಡಿತ್ತು. ಆದರೆ ಇಲ್ಲೊಬ್ಬ ಒಂದೆರಡಲ್ಲ, ಬರೋಬ್ಬರಿ 163 ಸಲ ಹೋಮ್‌ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ್ದಾನೆ. ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದ ವ್ಯಕ್ತಿಯ ವಿರುದ್ದ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಗ್ಲಾಸ್ ಹಾಗೂ ಪ್ಲೈವುಡ್ ವ್ಯವಹಾರವನ್ನು ನಡೆಸುತ್ತಿದ್ದ ಸಹಬ್ ಸಿಂಗ್ ಎಂಬಾತ ಜೂನ್ 29ರಂದು ಮುಂಬೈನಿಂದ ಕೋಟೇಶ್ವರಕ್ಕೆ ಆಗಮಿಸಿದ್ದ, ಮುಂಬೈನಿಂದ ಬಂದ ಕಾರಣಕ್ಕೆ ಜುಲೈ 13ರ ವರೆಗೂ ಅಂದ್ರೆ 14 ದಿನಗಳ ಹೋಮ್ ಕ್ವಾರಂಟೈನ್ ವಿಧಿಸಲಾಗಿತ್ತು. ಆದ್ರೆ ಸಹಬ್ ಸಿಂಗ್ ಹೋಮ್ ಕ್ವಾರಂಟೈನ್ ಅವಧಿಯಲ್ಲಿ ನಿಯಮವನ್ನು ಉಲ್ಲಂಘಿಸಿ, ಉಡುಪಿಯ ಹೋಟೆಲ್ ಗಳಿಗೆ ತಿರುಗಾಡಿದ್ದಾನೆ. ಜಿಪಿಎಸ್ ಟ್ರಾಕರ್ ನಲ್ಲಿ ವ್ಯಕ್ತಿ ಬರೋಬ್ಬರಿ 163 ಬಾರಿ ಮನೆಯಿಂದ ಹೊರಗೆ ಬಂದಿರುವುದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌.ಜಿ. ಭಟ್‌ ಅವರ ದೂರಿನ ಮೇರೆಗೆ ಕುಂದಾಪುರ ಠಾಣೆಯ ಪೊಲೀಸರು ಸಹಬ್‌ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ 269,270 ರಡಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.