ಸೋಮವಾರ, ಏಪ್ರಿಲ್ 28, 2025
HomeBreakingಹೊರಬಿತ್ತು ಆತಂಕಕಾರಿ ಸಂಗತಿ….!! ದೇಶದಲ್ಲೇ ಅತ್ಯಂತ ಹೆಚ್ಚು ಸಕ್ರಿಯ ಪ್ರಕರಣ ದಾಖಲಿಸಿದ ಬೆಂಗಳೂರು…!!

ಹೊರಬಿತ್ತು ಆತಂಕಕಾರಿ ಸಂಗತಿ….!! ದೇಶದಲ್ಲೇ ಅತ್ಯಂತ ಹೆಚ್ಚು ಸಕ್ರಿಯ ಪ್ರಕರಣ ದಾಖಲಿಸಿದ ಬೆಂಗಳೂರು…!!

- Advertisement -

ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರು ಕೊರೋನಾ ಎರಡನೇ ಅಲೆಯಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ, ಔಷಧಿ ಕೊರತೆ ಹಾಗೂ ಮೀತಿಮೀರಿದ ಭ್ರಷ್ಟಾಚಾರದಿಂದ ಜನರ ಪಾಲಿಗೆ ಸಾವಿನ ಮನೆಯಾಗುವ ಭೀತಿಯಲ್ಲಿದೆ. ಈ ಮಧ್ಯೆ ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಕೊರೋನಾ ಸೋಂಕಿತರನ್ನು ಹೊಂದಿದ ನಗರಗಳಲ್ಲಿ ಬೆಂಗಳೂರೇ ಅಗ್ರಸ್ಥಾನದಲ್ಲಿದೆ ಎಂದ ಸತ್ಯ ಹೊರಬಿದ್ದಿದೆ.

ದಾಖಲೆಗಳ ಪ್ರಕಾರ ಇಡಿ ದೇಶದಲ್ಲಿಯೇ ಅತಿಹೆಚ್ಚು ಅಂದ್ರೇ 1.5 ಕೊರೋನಾ ಸೋಂಕಿತರ ಬೆಂಗಳೂರಿನಲ್ಲಿ ದಾಖಲಾಗಿದ್ದು, ಶುಕ್ರವಾರ ಒಂದೇ ದಿನ 26962 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರವೊಂದರಲ್ಲೇ 16662 ಪ್ರಕರಣಗಳು ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 1 ಲಕ್ಷದ 59 ಸಾವಿರದ ಗಡಿ ದಾಟಿದೆ.

ಏಪ್ರಿಲ್ ಅಂತ್ಯದ ವೇಳೆಗೆ 1.5 ಲಕ್ಷದ ಗಡಿಯಲ್ಲಿರುವ ಸಕ್ರಿಯ ಪ್ರಕರಣಗಳು  ಮೇ 1 ರ ವೇಳೆಗೆ ದಿನವೊಂದಕ್ಕೆ 25 ಸಾವಿರಕ್ಕೂ ಅಧಿಕಕ್ಕೆ ದಾಟಿದರೂ ಅಚ್ಚರಿ ಏನಿಲ್ಲ ಅಂತಿದ್ದಾರೆ ವೈದ್ಯರು. ಬೆಂಗಳೂರಿನ ನಂತರದ ಸ್ಥಾನದಲ್ಲಿ ಪುಣೆ ಇದ್ದು, ಇಲ್ಲಿ ಇದುವರೆಗೂ 1.1 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ ಹತ್ತಿರವಿದ್ದು, ಮುಂಬೈನಲ್ಲಿ 81174  ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬೆಂಗಳೂರು ಸಕ್ರಿಯ ಪ್ರಕರಣದಲ್ಲಿ ಸೋಂಕಿತರ ನಿರ್ವಹಣೆಗೆ  ಆಸ್ಪತ್ರೆ, ಆಕ್ಸಿಜನ್, ಮೆಡಿಸಿನ್  ಕೊರತೆ ಎದುರಾಗುತ್ತಿದೆ. ಇನ್ನು ಸಕ್ರಿಯ ಪ್ರಕರಣಗಳ ಕತೆ ಇದಾದರೇ ಇನ್ನೂ ಜನಸಂಖ್ಯೆಯ ಶೇಕಡಾ 70 ರಷ್ಟು  ಹೋಂ ಐಲೋಷೇಶನ್ ನಲ್ಲೇ ಇದ್ದು, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊರತೆಗಳನ್ನು ಸರ್ಕಾರ ಎದುರಿಸುತ್ತಿವೆ.

ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ  ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ತಕ್ಷಣವೇ ಸಂಪೂರ್ಣ ಲಾಕ್ ಡೌನ್ ಮಾಡ ಬೇಕೆಂಬ ಒತ್ತಡ ಕೇಳಿಬಂದಿದೆ. ದೇಶದಲ್ಲೇ ಸಕ್ರಿಯ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಿರೋದು ಜನತೆಯ ಆತಂಕಕ್ಕೆ ಕಾರಣವಾಗಿದೆ.  

RELATED ARTICLES

Most Popular