Teachers Day Modi Wish: ಕೊರೊನಾ ಸಂಕಷ್ಟದಲ್ಲೂ ಕರ್ತವ್ಯ ಪ್ರಜ್ಞೆ : ಶಿಕ್ಷಕರ ಕಾರ್ಯಕ್ಕೆ ಪ್ರಧಾನಿ ಮೋದಿ ಗುಣಗಾನ

ನವದೆಹಲಿ : ಶಿಕ್ಷಕರ ದಿನಾಚರಣೆಯನ್ನು ದೇಶದಾದ್ಯಂತ ಗೌರವದಿಂದ ಆಚರಿಸಲಾಗುತ್ತಿದೆ. ಗುರುವಿಗೆ ನಮಿಸಿ ಗೌರವ ಸೂಚಿಸಲಾಗುತ್ತಿದೆ. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ಶಿಕ್ಷಕರ ಕಾರ್ಯಕ್ಕೆ ಗುಣಗಾನ ಮಾಡಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಶಿಕ್ಷಕರ ಪಾತ್ರವನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಟ್ವೀಟರ್‌ ಖಾತೆಯಲ್ಲಿ ಶಿಕ್ಷಕರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಶಿಕ್ಷಕರ ದಿನದಂದು, ಯುವ ಮನಸ್ಸುಗಳನ್ನು ಬೆಳೆಸುವಲ್ಲಿ ಎಂದಿಗೂ ಪ್ರಮುಖ ಪಾತ್ರ ವಹಿಸುವ ಸಂಪೂರ್ಣ ಬೋಧನಾ ಭ್ರಾತೃತ್ವಕ್ಕೆ ಶುಭಾಶಯಗಳು. ಕೋವಿಡ್ -19 ಸಮಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಪ್ರಯಾಣ ಮುಂದುವರಿದಂತೆ ಶಿಕ್ಷಕರು ಹೇಗೆ ಹೊಸತನವನ್ನು ಮತ್ತು ಖಾತ್ರಿಪಡಿಸಿದ್ದಾರೆ ಎನ್ನುವ ಮೂಲಕ ಶ್ಲಾಘಿಸಿದ್ದಾರೆ.

ಅಲ್ಲದೇ ಡಾ.ಎಸ್. ರಾಧಾಕೃಷ್ಣನ್ ಅವರ ಜಯಂತಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ವಿಶಿಷ್ಟ ವಿದ್ಯಾರ್ಥಿವೇತನ ಹಾಗೂ ನಮ್ಮ ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : 1 – 5 Class ಕರ್ನಾಟಕದಲ್ಲಿ ಸದ್ಯಕ್ಕೆ ಆರಂಭವಿಲ್ಲ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : ಶೀಘ್ರದಲ್ಲಿಯೇ 17 ಸಾವಿರ ಅತಿಥಿ ಉಪನ್ಯಾಸಕರ ನೇಮಕ : ಸಚಿವ ಅಶ್ವಥ್ ನಾರಾಯಣ

( Prime Minister Narendra Modi congratulates Teachers’ Day )

Comments are closed.