Sudeep: ಸುದೀಪ್ ಹಿರಿಮೆಗೆ ಮತ್ತೊಂದು ಗರಿ: ಸಾಮಾಜಿಕ ಕಾರ್ಯಕ್ಕೆ ಮೆಚ್ಚಿ ಗೌರವಿಸಿದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ

ಕೊರೋನಾ ಸಂಕಷ್ಟದಲ್ಲಿರುವವರಿಗೆ ನೆರವು, ಬಡ ವಿದ್ಯಾರ್ಥಿಗಳಿಗೆ ಸಹಾಯ, ಸರ್ಕಾರಿಶಾಲೆಗಳನ್ನು ದತ್ತು ಪಡೆಯೋದು ಹೀಗೆ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರೋ ಸುದೀಪ್ ಗೆ ಗೌರವವೊಂದು ಒಲಿದು ಬಂದಿದ್ದು, ಕಿಚ್ಚದ ಹಿರಿಮೆ ಮತ್ತಷ್ಟು ಹೆಚ್ಚಿದೆ.

ಸ್ಯಾಂಡಲ್ ವುಡ್ ನಟ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಸುದೀಪ್ ರನ್ನ ಸನ್ಮಾನಿಸಿ ಗೌರವಿಸಿದೆ.

ಫೆ.14 2017 ರಂದು ಆರಂಭವಾದ ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ನ ಸಾಧನೆ, ಸಮಾಜಮುಖಿಯಾಗಿ ನಡೆಸಿದ ಕಾರ್ಯಗಳನ್ನು ರೋಟರಿ ಸಂಸ್ಥೆ ಗುರುತಿಸಿದೆ. ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲೆಗಳನ್ನು ದತ್ತು ಪಡೆದಿರುವುದನ್ನು ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರೋಟರಿ ಸಂಸ್ಥೆಯ ಪದಾಧಿಕಾರಿಗಳು ಕಿಚ್ಚ ಸುದೀಪ್ ರನ್ನು ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದ್ದಾರೆ. ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಸಪ್ಟೆಂಬರ್ 2 ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಅಂದಾಜು 10 ಸಾವಿರದಷ್ಟು ಅಭಿಮಾನಿಗಳು ರಕ್ತದಾನ ಮಾಡಿದ್ದರು.

ಇದಕ್ಕೂ ಕೊರೋನಾ ಸಂಕಷ್ಟದಲ್ಲೂ ನಟ ಸುದೀಪ್ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರು, ತಂತ್ರಜ್ಞರು,ಶಿಕ್ಷಕರು ಸೇರಿದಂತೆ ಹಲವರಿಗೆ ನೆರವಾಗಿದ್ದರು.

sandalwood actor sudeep facilitated by international rotary club

Comments are closed.