ಸಾಧನೆಗೆ ಅಡ್ಡಿಯಾಗಲಿಲ್ಲ ಒಂದೇ ಕಿಡ್ನಿ….! ಅಂಜುಬಾಬಿ ಜಾರ್ಜ್ ಹೇಳಿದ್ದೇನು ಗೊತ್ತಾ…?!

ನವದೆಹಲಿ: ಭಾರತದ ಕ್ರೀಡಾ ಇತಿಹಾಸದಲ್ಲಿ ಹಲವು ಪದಕಗಳ ಸಾಧನೆ ಗೈಯ್ದ ಅಥ್ಲೀಟ್ ಅಂಜು ಬಾಬ್ಬಿ ಜಾರ್ಜ್ ಸಾಧನೆ ಹಿಂದೆ ಒಂದು ನೋವಿನ ಕತೆ ಇದೆ.

ಕೊರತೆಯನ್ನು,ಅನಾರೋಗ್ಯವನ್ನು ಮುಚ್ಚಿಟ್ಟು ದೇಶಕ್ಕೆ ಗೌರವ ತಂದ ಅಥ್ಲೀಟ್ ಅಂಜುಬಾಬಿ ಜಾರ್ಜ್, ಟ್ವೀಟ್ ನಲ್ಲಿ ಈ ಸಂಗತಿಯನ್ನು ಈಗ ಹಂಚಿಕೊಂಡಿದ್ದಾರೆ.

ನೀವು ನಂಬುತ್ತಿರೋ ಬಿಡುತ್ತಿರೋ ಆದರೆ ವಿಶ್ವದ ಉನ್ನತ ಸ್ಥಾನ ಪಡೆದ ಕೆಲವೇ ಅದೃಷ್ಟಶಾಲಿಗಳಲ್ಲಿ ನಾನು ಒಬ್ಬಳು. ಅದೂ ಒಂದೇ ಕಿಡ್ನಿ ಯಿಂದ ಅನ್ನೋದು ಇನ್ನೊಂದು ವಿಶೇಷ. ಒಂದೇ ಒಂದು ಪೇನ್ ಕಿಲ್ಲರ್ ತೆಗೆದುಕೊಂಡರು ಆಗದಂತಹ ಅಲರ್ಜಿ, ಕಾಲು ನೋವು ಹೀಗೆ ಹಲವು ಇತಿ-ಮಿತಿಗಳ ನಡುವೆಯೂ ನಾನು ಮ್ಯಾಜಿಕ್ ನಂತಹ ಸಾಧನೆ ಮಾಡಿದ್ದೇನೆ. ಇದರ ಹಿಂದಿನ ಶಕ್ತಿ ನನ್ನ ಕೋಚ್ ಎಂದಿದ್ದಾರೆ.

ಸ್ವತಃ ಅಂಜುಬಾಬ್ಬಿ ಜಾರ್ಜ್ ಈ ವಿಚಾರವನ್ನು ಹಂಚಿಕೊಳ್ಳುವವರೆಗೂ ಯಾರಿಗೂ ಈ ಸಂಗತಿ ಗೊತ್ತೇ ಇರಲಿಲ್ಲ. ಅಂಜು ಬಿಚ್ಚಿಟ್ಟ ಈ ಆಘಾತಕಾರಿ ಸಂಗತಿ ಕಂಡು ಎಲ್ಲರೂ ಅಚ್ಚರಿಕೊಂಡಿದ್ದು ದೈಹಿಕ ನೋವು,ಆರೋಗ್ಯ ಸಮಸ್ಯೆಗಳ‌ ನಡುವೆಯೂ ಅಂಜು ದೇಶಕ್ಕೆ ತಂದ ಗೌರವ ನೆನಪಿಸಿಕೊಂಡು ಶ್ಲಾಘಿಸುತ್ತಿದ್ದಾರೆ.

ಅಂಜುಬಾಬ್ಬಿ ಜಾರ್ಜ್ ತಮ್ಮ ಒಂದೇ ಕಿಡ್ನಿಯ ದೇಹಾರೋಗ್ಯದ ನಡುವೆಯೂ ೨೦೦೩ ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಕಂಚಿನ ಗೌರವ ತಂದಿದ್ದು, ೨೦೦೫ ರಲ್ಲಿ ಮೊನಾಕೋದಲ್ಲಿ ನಡೆದ ಐಎಎಎಫ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ಭಾರತದ ಗೌರವ ಹೆಚ್ಚಿಸಿದ್ದಾರೆ.ಅಂಜುಬಾಬಿ ಜಾರ್ಜ್ ಅವರಿಗೆ ಅವರ ಪತಿ ರಾಬರ್ಟ್ ಬಾಬಿ ಜಾರ್ಜ್ ಕೋಚ್ ಆಗಿದ್ದು ತಮ್ಮ ಸಾಧನೆಯ ಶಕ್ತಿ ಎಂದು ಅಂಜು ಹೇಳಿಕೊಳ್ಳುತ್ತಾರೆ.

ಇನ್ನು ಅಂಜು ಹಂಚಿಕೊಂಡಿರುವ ಒಂದೇ ಕಿಡ್ನಿ ವಿಷಯದ ಟ್ವೀಟ್ ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದು, ಅಂಜುಬಾಬ್ಬಿ ತಮ್ಮ ಪರಿಶ್ರಮ ಕಷ್ಟದ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ನೀವಾಗಿದ್ದು, ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.

ಚಿಕ್ಕಪುಟ್ಟ ಕೊರತೆಗಳನ್ನೇ ಕಾರಣವಾಗಿಟ್ಟುಕೊಂಡು ಸಾಧನೆಯಿಂದ ಹಿಂದೆ ಸರಿಯುವ ಜನರಿಗೆ ಅಂಜುಬಾಬ್ಬಿ ಜಾರ್ಜ್ ಸಾಧನೆ ಮಾದರಿಯಾಗಿದೆ

Comments are closed.