ಕೂಸು ಹುಟ್ಟುವ ಮೊದಲೇ ಕುಲಾವಿ…! ಬೇಬಿ ಕೇರ್ ಶಾಪ್ ನಲ್ಲಿ ಕೊಹ್ಲಿ ಶಾಪಿಂಗ್…!

ಸಿಡ್ನಿ:  ಇನ್ನೇನು ಹೊಸ ವರ್ಷದ ಆರಂಭದಲ್ಲೇ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿರುವ ಭಾರತೀಯ ಕ್ರಿಕೆಟಿಗ್ ವಿರಾಟ್ ಕೊಹ್ಲಿ, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೇ ಸಿಡ್ನಿಯಲ್ಲಿ ಬೇಬಿ ಕೇರ್ ಶಾಪ್ ಗೆ ಭೇಟಿ ಕೊಟ್ಟಿದ್ದು, ಪೋಟೋ ಎಲ್ಲೆಡೆ ವೈರಲ್ ಆಗಿದೆ.

ಪ್ರವಾಸ ಸರಣಿ ಮ್ಯಾಚ್ ಗಳಿಗಾಗಿ ಸಧ್ಯ ಆಸ್ಟ್ರೇಲಿಯಾದಲ್ಲಿರುವ ಕ್ರಿಕೆಟ್ ತಂಡ ಈಗಾಗಲೇ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ  ಕಳೆದುಕೊಂಡಿದೆ. ಟಿ20ಐ ಸರಣಿಯ ಎರಡು ಪಂದ್ಯ ಗೆದ್ದಿರುವ ಭಾರತ ಮಂಗಳವಾರ ಕೊನೆಯ ಪಂದ್ಯದಲ್ಲಿ ಸೆಣಸಲಿದೆ.  ಪಂದ್ಯಗಳ ನಡುವಿನ ಬಿಡುವಿನಲ್ಲಿ ಸಿಡ್ನಿಯಲ್ಲಿರುವ ಬೇಬಿ ಕೇರ್ ಶಾಪ್ ಗೆ ಭೇಟಿ ನೀಡಿ ಸಖತ್ ಶಾಪಿಂಗ್ ಮಾಡಿದ್ದಾರೆ.

ಕೊಹ್ಲಿ ಹುಟ್ಟುವ ಮಗುವಾಗಿ ಸಾಕಷ್ಟು ಶಾಪಿಂಗ್ ಮಾಡಿದ್ದು, ಕೊಹ್ಲಿ ಪರ್ಚೆಸಿಂಗ್ ಗೆ ಬೌಲರ್ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದಾರಂತೆ.  ಕೊಹ್ಲಿ ಬೇಬಿ ಕೇರ್ ಸೆಂಟರ್ ಗೆ ಭೇಟಿ ನೀಡಿರುವ ಪೋಟೋಗಳು ಸಖತ್ ವೈರಲ್ ಆಗಿದ್ದು, ಜನರು ಕಮೆಂಟ್ ಮಾಡ್ತಿದ್ದಾರೆ.

2017 ರ ಡಿಸೆಂಬರ್ ನಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟ ಕೊಹ್ಲಿ ಹಾಗೂ ಅನುಷ್ಕಾ 2021 ರ ಜನವರಿಯಲ್ಲಿ ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗಿದ್ದರೂ ಜಾಹೀರಾತು ಶೂಟಿಂಗ್ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ ಅನುಷ್ಕಾ ತಮ್ಮ ಪೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಅನುಷ್ಕಾ ತಮ್ಮ ಪ್ರೀತಿಯ ಶೀರ್ಷಾಸನ ಯೋಗ ಮಾಡಲು ವೈದ್ಯರು ಅನುಮತಿ ನೀಡಿದ ಸಂಗತಿ ಹಂಚಿಕೊಂಡು ಶೀರ್ಷಾಷನ ಮಾಡುತ್ತಿರುವ ಪೋಟೋ ಶೇರ್ ಮಾಡಿದ್ದರು. ಮಗು ಜನನದ ವೇಳೆ ಕ್ರಿಕೆಟ್ ಮ್ಯಾಚ್ ನಿಂದ ದೂರು ಉಳಿಯಲು ನಿರ್ಧರಿಸಿರುವ ಕೊಹ್ಲಿ ಈಗಾಗಲೇ ಇದಕ್ಕಾಗಿ ಪಿತೃತ್ವ ರಜೆ ಪಡೆದುಕೊಂಡಿದ್ದು, ಶಾಪಿಂಗ್ ಮಾಡೋ ಮೂಲಕ ಮಗುವಿಗೆ ಸಪ್ರೈಸ್ ಗಿಫ್ಟ್ ಕೊಡೋಕೆ ಸಿದ್ಧವಾಗ್ತಿರೋವಂತಿದೆ.

Comments are closed.