ದುಬಾರಿಯಾಯ್ತು ಪ್ರೇಮಸೌಧ ಎಂಟ್ರಿ….! ಪ್ರವೇಶದರ ಏರಿಸಲು ಆಡಳಿತ ಮಂಡಳಿ ನಿರ್ಧಾರ…!!

ಆಗ್ರಾ: ಕೊರೋನಾದಿಂದ ಒಂದಷ್ಟು ಕಾಲ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದ ಪ್ರೇಮಸೌಧ ತಾಜ್ ಮಹಲ್ ಈಗ ಮತ್ತೆ ಪ್ರವಾಸಿಗರಿಂದ ತುಂಬಿ ತುಳುಕಲಾರಂಭಿಸಿದೆ. ಈ ಮಧ್ಯೆ ಪ್ರೇಮಸೌಧದ ಎಂಟ್ರಿ ಫೀಸ್ ಹೆಚ್ಚಿಸಲು ಆಡಳಿತ ಮಂಡಳಿ  ನಿರ್ಧರಿಸಿದೆ.

ತಾಜ್ ಮಹಲ್ ಎಂಟ್ರಿ ದರದ ಮೇಲೆ ಭಾರತೀಯರಿಗೆ 30 ರೂಪಾಯಿ ಹಾಗೂ ವಿದೇಶಿಗರಿಗೆ ಬರೋಬ್ಬರಿ 100 ರೂಪಾಯಿ ದರ ಏರಿಸಲು ಆಗ್ರಾದ ತಾಜ್ ಮಹಲ್ ಆಡಳಿತ ಮಂಡಳಿ ನಿರ್ಧರಿಸಿದೆ.

ಇನ್ಮುಂದೆ ಆಗ್ರಾದ ತಾಜ್ ಮಹಲ್ ಗೆ ನೀವು ಭೇಟಿ ನೀಡಬೇಕೆಂದರೇ ಭಾರತೀಯರಾಗಿದ್ದರೇ 80 ಹಾಗೂ ವಿದೇಶಿಗರಾಗಿದ್ದರೇ 1200 ರೂಪಾಯಿ ನೀಡಬೇಕು. ತಾಜ್ ಮಹಲ್ ನ ಗುಮ್ಮಟದೊಳಗೆ ಪ್ರವೇಶಿಸಲು ಭಾರತೀಯರು 250 ಹಾಗೂ ವಿದೇಶಿಯರು 1300 ನೀಡೋದು ಅನಿವಾರ್ಯ.

ತಾಜ್ ಮಹಲ್ ಆಡಳಿತ ಮಂಡಳಿ ದರ ಏರಿಸಿರುವುದನ್ನು ಆಗ್ರಾದ ಡಿವಿಸನ್ ಕಮೀಷನರ ಖಚಿತಪಡಿಸಿದ್ದು, ಪ್ರವಾಸಿಗರ ಭೇಟಿ ಹೆಚ್ಚಿದೆ. ಹೀಗಾಗಿ ದರವನ್ನು ಏರಿಕೆ ಮಾಡಲಾಗಿದೆ ಎಂದಿದ್ದಾರೆ.

Comments are closed.