ಅಶ್ವಿನ್, ಅಕ್ಷರ್ ಪಟೇಲ್ ಸ್ಪೀನ್ ಮೋಡಿ : ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿದ ಭಾರತ

ಚೆನ್ನೈ: ಸ್ಪೀನ್ ಮಾಂತ್ರಿಕರಾದ ಅಕ್ಷರ್‌ ಪಟೇಲ್‌ ಮತ್ತು ಅಶ್ವಿನ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಭಾರತದ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಭಾರತ ತಂಡ ಇಂಗ್ಲೆಂಡ್ ಗೆ ನೀಡಿದ್ದ 482 ರನ್ ಗಳ ಟಾರ್ಗೇಟ್ ಪಡೆದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲಿಯೇ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಆಘಾತ ನೀಡಿದ್ರು. ಕೇವಲ 164 ರನ್ ಗಳಿಸುವಷ್ಟರಲ್ಲಿಯೇ ಇಂಗ್ಲೆಂಡ್ ತಂಡ ಸರ್ಪಪತನ ಕಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 329 ರನ್ ಗಳಿಸಿದ್ರೆ, ಇಂಗ್ಲೆಂಡ್‌ 134 ರನ್ ಗಳಿಗೆ ಸರ್ಪ ಪತನ ಕಂಡಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 286 ಆಲೌಟಾಗಿತ್ತು.
53 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ 164 ರನ್ ಗಳಿಸುವಷ್ಟರಲ್ಲೇ ಸರ್ಪ ಪತನ ಕಂಡಿದೆ. ಅಕ್ಷರ್ ಪಟೇಲ್ 5 ವಿಕೆಟ್ ಪಡೆದುಕೊಂಡ್ರೆ ಅಶ್ವಿನ್ 3 ವಿಕೆಟ್ ಪಡೆದರು. ಇನ್ನು ಕುಲದೀಪ್ ಯಾದನ್ 2 ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಗೆಲುವನ್ನು ತಂದಿತ್ತರು.

Comments are closed.