Asha bhat:ಗಾಯಕಿಯಾದ ರಾಬರ್ಟ್ ಬೆಡಗಿ…! ಪುನೀತ್ ಅಭಿಮಾನಿಗಳ ಮನಗೆದ್ದ ಆಶಾ ಭಟ್ …!!

ರಾಬರ್ಟ್ ಸಿನಿಮಾದ ಯಶಸ್ಸಿನ ಬಳಿಕ ಸ್ಯಾಂಡಲ್ ವುಡ್ ಬೆಡಗಿ ಹಾಗೂ ಮಾಡೆಲ್ ಆಶಾ ಭಟ್ ಗೆ ಬೇಡಿಕೆ ಹೆಚ್ಚಾಗಿದೆಯಂತೆ. ಹಲವು ಹೊಸ ಸಿನಿಮಾಗಳಲ್ಲಿ ಸಹಿ ಮಾಡಿರೋ ಆಶಾ ಭಟ್ ಸದ್ಯ ಬಿಡುವಿನ ವೇಳೆಯನ್ನು ಎಂಜಾಯ್ ಮಾಡ್ತಿದ್ದಾರೆ. ಒಳ್ಳೆಯ ನೃತ್ಯ ಕಲಾವಿದೆಯಾಗಿರೋ ಆಶಾ ಈಗ ತಾವು ಒಳ್ಳೆ ಗಾಯಕಿ ಅನ್ನೋದನ್ನು ಸಾಬೀತು ಮಾಡಿದ್ದಾರೆ.

ಶೂಟಿಂಗ್ ಇನ್ನೂ ಆರಂಭವಾಗದೇ ಇರೋದರಿಂದ ಸದ್ಯ ಮನೆಯಲ್ಲೇ ಬಿಡುವಿನ ವೇಳೆ ಕಳೆಯುತ್ತಿರುವ ಆಶಾ ಭಟ್ ಗಾಯಕಿಯಾಗಿದ್ದಾರೆ.

ಮಿಲನ ಚಿತ್ರದ ಮಳೆ ನಿಂತು ಹೋದ ಮೇಲೆ ಹಾಡಿಗೆ ಧ್ವನಿಯಾದ ಆಶಾ ಭಟ್ ತಾವು ಹಾಡಿದ ಹಾಡನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಆಶಾ ಭಟ್ ಶೇರ್ ಮಾಡಿಕೊಂಡಿರೋ ಪುನೀತ್ ರಾಜಕುಮಾರ್ ಅಭಿನಯದ ಮಿಲನ್ ಚಿತ್ರದ ಹಾಡು ನೋಡಿ ಪುನೀತ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

2014 ರ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಆಗಿರೋ ಆಶಾ ಭಟ್, ನಟನೆಗೂ ಮುನ್ನ ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿದ್ದು, 2019 ರಲ್ಲಿ ಬಾಲಿವುಡ್ ಪ್ರವೇಶಿಸಿದರು. ಜಂಗ್ಲಿ ಸಿನಿಮಾದಲ್ಲಿ ನಟಿಸಿದ್ದ ಆಶಾ ಭಟ್, ಕನ್ನಡದಲ್ಲಿ ರಾಬರ್ಟ್ ಗೆ ದರ್ಶನ್ ನಾಯಕಿಯಾಗಿ ಮಿಂಚಿದ್ದಾರೆ.

https://fb.watch/v/1HLGPyrrC/

ಅದ್ಭುತ ಡ್ಯಾನ್ಸರ್ ಆಗಿ ಗುರುತಿಸೋಕೊಂಡಿರೋ ಆಶಾ ಭಟ್ ಆಗಾಗ ಹಾಡು ಗುನುಗೋ ಮೂಲಕ ಅಭಿಮಾನಿಗಳಿಗೆ ವಿಡಿಯೋ ಜೊತೆ ಸಪ್ರೈಸ್ ನೀಡುತ್ತಾರೆ.

Comments are closed.