ಸಿಎಂಗೆ ಕೊರೋನಾ ಸೋಂಕು ಎಫೆಕ್ಟ್…! ಏಪ್ರಿಲ್ 18 ರ ಸರ್ವಪಕ್ಷ ಸಭೆ ಮುಂದೂಡಿಕೆ…!!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಸಿಎಂ ಬಿಎಸ್ವೈಯಿಂದ ಆರಂಭಿಸಿ ಮಾಜಿಸಿಎಂ, ಸಿನಿಮಾ ನಟ-ನಟಿಯರು ಸೇರಿದಂತೆ ಹಲವರಿಗೆ ಕೊರೋನಾ ಸೋಂಕು ತಗುಲಿದೆ. ಈ ಮಧ್ಯೆ ರಾಜ್ಯದ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಕರೆದಿದ್ದ ಸರ್ವಪಕ್ಷ ಸಭೆ ಮುಂದೂಡಿಕೆಯಾಗಿದೆ.

ಏಪ್ರಿಲ್ 18 ರಂದು ಸರ್ವಪಕ್ಷ ಸಭೆ ಕರೆಯಲಾಗಿತ್ತು. ರಾಜ್ಯದಲ್ಲಿ ತೀವ್ರವಾಗಿರುವ ಕೊರೋನಾ ಎರಡನೇ ಅಲೆಯ ನಿಯಂತ್ರಣದ ನಿಟ್ಟಿನಲ್ಲಿ ಅಗತ್ಯ ಸಲಹೆ ಪಡೆಯಲು ಸರ್ವಪಕ್ಷ ಸಭೆ ಕರೆಯಲಾಗಿತ್ತು.  ಆದರೆ ಸಿಎಂ ಬಿಎಸ್ವೈ ಗೆ ಎರಡನೇ ಭಾರಿ ಕೊರೋನಾ ಸೋಂಕು ಪಾಸಿಟಿವ್ ಆಗಿದೆ.

ಹೀಗಾಗಿ ಸಿಎಂ ಬಿಎಸ್ವೈ ಚಿಕಿತ್ಸೆಗಾಗಿ ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಏಪ್ರಿಲ್ 18 ರಂದು ಸಂಜೆ 4 ಗಂಟೆಗೆ ಕರೆಯಲಾಗಿದ್ದು ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ಸಿಎಂ ಬಿಎಸ್ವೈ ಇಲ್ಲದೇ ಸರ್ವಪಕ್ಷ ಸಭೆ ನಡೆಸೋದು ಸೂಕ್ತವಲ್ಲ ಎಂಬ ಕಾರಣಕ್ಕೆ  ಸಭೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ಸರ್ವಪಕ್ಷ ಸಭೆಯಲ್ಲಿ ಮಾಜಿಸಿಎಂಗಳಾದ ಸಿದ್ಧರಾಮಯ್ಯ, ಕುಮಾರಸ್ವಾಮಿ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುತ್ತಾರೆ ಎಂದು ನೀರಿಕ್ಷಿಸಲಾಗಿತ್ತು. ಆದರೆ ಮಾಜಿಸಿಎಂ ಕುಮಾರಸ್ವಾಮಿ ಕೂಡ ಕೊರೋನಾ ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರು ಕೂಡ ಸಭೆಯಲ್ಲಿ ಪಾಲ್ಗೊಳ್ಳುವುದು ಅನುಮಾನ.

ಕರ್ನಾಟಕದಲ್ಲಿ ಇದುವರೆಗೂ 14,859 ಜನರಿಗೆ ಸೋಂಕು ತಗುಲಿದೆ. ಈ ಪೈಕಿ  ಒಂದೇ ದಿನ 78 ಜನರು ಸಾವನ್ನಪ್ಪಿದ್ದಾರೆ.  ಒಟ್ಟು ಇದುವರೆಗೂ 13 ಸಾವಿರಕ್ಕೂ ಅಧಿಕ ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

Comments are closed.