ದಚ್ಚು ಸಾಧನೆಗೆ ಮತ್ತೊಂದು ಗರಿ…! ಮ್ಯೂಸಿಕಲ್ ಹಿಟ್ ದಾಖಲಿಸಿದ ರಾಬರ್ಟ್…!!

ಬರೋಬ್ಬರಿ ಎರಡು ವರ್ಷಗಳ ಬಳಿಕ ಥಿಯೇಟರ್ ಗೆ ಲಗ್ಗೆ ಇಟ್ಟ ಬಾಕ್ಸಾಫೀಸ್ ಬಾದ್ ಶಾ ದಚ್ಚು ಅಭಿನಯದ  ರಾಬರ್ಟ್ ಸಿನಿಮಾ ಮತ್ತೊಂದು ಮೈಲಿಗಲ್ಲು ಬರೆದಿದೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿದ ರಾಬರ್ಟ್ ಈಗ ಮ್ಯೂಸಿಕಲ್ ಹಿಟ್ ಪಟ್ಟ ಪಡೆದುಕೊಂಡಿದೆ.

ಕನ್ನಡ,ತೆಲುಗಿನಲ್ಲಿ ಸಖತ್ ವೀವ್ಸ್ ಪಡೆದ ರಾಬರ್ಟ್ ಸಿನಿಮಾದ ಹಾಡುಗಳೇ ಈಗ ಹೊಸ ದಾಖಲೆ ಬರೆದಿದ್ದು, ಅಂದಾಜು 5 ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

ಬಾಬಾಬಾ ನಾ ರೆಡಿ, ದೋಸ್ತಾ ಕಣೋ,ಜೈಶ್ರೀರಾಮ,ಕಣ್ಣು ಹೊಡೆಯಾಕಾ, ಡ್ಯಾನ್ಸ್ ಪ್ಲೋರ್ ರೆಡಿ  ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಕಣ್ಣು ಹೊಡಿಯಾಕ್ ಹಾಡು ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲಿ ಸೂಪರ್ ಹಿಟ್ ಎನ್ನಿಸಿದ್ದು, ಈ ಹಾಡಿನ ಮೂಲಕ ಗಾಯಕಿ ಮಂಗ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಕಣ್ಣು ಹೊಡಿಯಾಕ್ ಹಾಡಿಗೆ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಯಾಗಿದ್ದು, ಆಡಿಯೋ ಹಾಗೂ ವಿಡಿಯೋ ಸಾಂಗ್ ಒಟ್ಟು 50 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ದಾಖಲೆ ಬರೆದಿದೆ. ಬೇಬಿ ಡ್ಯಾನ್ಸ್ ಪ್ಲೋರ್ ರೆಡಿ ಹಾಡು ಬರೋಬ್ಬರಿ 15 ಮಿಲಿಯನ್, ಜೈಶ್ರೀರಾಮ ಹಾಡು 18 ಮಿಲಿಯನ್  ಜನರು ವೀಕ್ಷಿಸಿದ್ದಾರೆ.

ದೋಸ್ತಾ ಕಣೋ ಹಾಡು ಅತ್ಯುತ್ತಮ ವೀಕ್ಷಣೆ ಕಂಡಿದ್ದು, 15 ಮಿಲಿಯನ್ಸ್ ವೀವ್ಸ್ ಪಡೆದಿದೆ. ಅಲ್ಲಿಗೆ ರಾಬರ್ಟ್ ಬಾಕ್ಸಾಫೀಸ್ ನಲ್ಲಿ ಮಾತ್ರವಲ್ಲ ಮ್ಯೂಸಿಕ್ ನಲ್ಲೂ ದಾಖಲೆ ಬರೆದಿದ್ದು, ಸೋಷಿಯಲ್ ಮೀಡಿಯಾ, ಪಾರ್ಟಿ,ಅಟೋ,ಡ್ಯಾನ್ಸ್ ಪ್ರೋಗ್ರಾಂಗಳಲ್ಲಿ ರಾಬರ್ಟ್ ಹಾಡುಗಳಿಗೆ ಬೇಡಿಕೆ ಹೆಚ್ಚಿದೆ.

Comments are closed.