ಸೋಮವಾರ, ಏಪ್ರಿಲ್ 28, 2025
HomeBreakingಸಂಪತ್ ರಾಜ್ ಗೆ ಬೇಲ್….ಅಖಂಡಶ್ರೀನಿವಾಸ್ ಮೂರ್ತಿ ಅಸಮಧಾನ…! ಬೀದಿಗೆ ಬಿತ್ತು ಕೈನಾಯಕರ ಬೀದಿಜಗಳ…!!

ಸಂಪತ್ ರಾಜ್ ಗೆ ಬೇಲ್….ಅಖಂಡಶ್ರೀನಿವಾಸ್ ಮೂರ್ತಿ ಅಸಮಧಾನ…! ಬೀದಿಗೆ ಬಿತ್ತು ಕೈನಾಯಕರ ಬೀದಿಜಗಳ…!!

- Advertisement -

 

ಕಾಂಗ್ರೆಸ್ ನಾಯಕರ ವೈಯಕ್ತಿಕ ಒಳಜಗಳಕ್ಕೆ ಸಾಕ್ಷಿಯಾಗಿದ್ದ ಡಿ.ಜೆ.ಹಳ್ಳಿ –ಕೆಜಿಹಳ್ಳಿ ಗಲಾಟೆ ಪ್ರಕರಣ ಚಾರ್ಜಶೀಟ್ ಸಲ್ಲಿಕೆ ಹಂತಕ್ಕೆತಲುಪಿದ್ದು ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಮಾಜಿ ಮೇಯರ್  ಸಂಪತ್ ರಾಜು ಗೆ ಕೊನೆಗೂ ಜಾಮೀನು ಸಿಕ್ಕಿದೆ. ಆದರೆ ಸಂಪತ್ ರಾಜು ಜಾಮೀನು ಅಖಂಡ ಶ್ರೀನಿವಾಸ್ ಮೂರ್ತಿ ಕೆರಳಿಸಿದ್ದು, ಪಕ್ಷದ ವರಿಷ್ಠರ ವಿರುದ್ಧ ಸೋನಿಯಾಗಾಂಧಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಡಿಜೆಹಳ್ಳಿ-ಕೆಜಿಹಳ್ಳಿ ಗಲಾಟೆಯ ಪ್ರಮುಖ ಆರೋಪಿಯಾಗಿದ್ದ ಸಂಪತ್ ರಾಜುವನ್ನು  ನವೆಂಬರ್ 16 ರಂದು ಬಂಧಿಸಿದ್ದರು.  ಬಳಿಕ ಅವರನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಸಂಪತ್ ರಾಜು ಬೇಲ್ ಗಾಗಿ  ಸಿಟಿ ಸಿವಿಲ್ ಕೋರ್ಟ್  ಮೆಟ್ಟಿಲೇರಿದ್ದರು. ಆದರೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಫೆ.12 ರಂದು ಜಾಮೀನು ಮಂಜೂರು ಮಾಡಿತ್ತು.

ಆದರೆ ಸಂಪತ್ ರಾಜು ಬೇಲ್ ಸಿಕ್ಕಿರುವುದಕ್ಕೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಧಾನ ವ್ಯಕ್ತಪಡಿಸಿದ್ದು, ನನಗೆ ಥ್ರೆಟ್ ಇದೆ. ಸಂಪತ್ ರಾಜು ಎಂಥವರು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಮನೆಯನ್ನೇ ಸುಟ್ಟು ಹಾಕಿದ್ದಾರೆ. ನಾನು ಈಗ ಬೀದಿಯಲ್ಲಿ ಬದುಕುತ್ತಿದ್ದೇನೆ.  ಇನ್ನು ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ರೇ ಏನು ಮಾಡಬಹುದು? ಕಾಂಗ್ರೆಸ್ ನಾಯಕರು ಇದಕ್ಕೆ ಸ್ಪಂದಿಸುತ್ತಿಲ್ಲ.  

ನಾನು ಹಲವಾರು ಭಾರಿ  ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಆದರೆ ಡಿಕೆಶಿ ಯಾಕೆ  ಸಂಪತ್ ರಾಜು ಅವರನ್ನು ಬೆಂಬಲಿಸುತ್ತಾರೆ ಎಂಬುದು ಗೊತ್ತಿಲ್ಲ.  ಸಿದ್ಧರಾಮಯ್ಯನವರು ಮಾತ್ರ ನನಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ನನಗಾದ ಅನ್ಯಾಯದ ಬಗ್ಗೆ ನಾನು ಸೋನಿಯಾಗಾಂಧಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಆಕ್ರೋಶ ತೋಡಿಕೊಂಡಿದ್ದಾರೆ.

ಈ ಮಧ್ಯೆ ಕೊನೆ ಕ್ಷಣದಲ್ಲಿ ಕೈನಾಯಕರ ಜಗಳಕ್ಕೆ ಎಂಟ್ರಿಯಾಗಿರುವ  ಮಾಜಿಸಿಎಂ ಸಿದ್ಧರಾಮಯ್ಯ ಸಂಪತ್ ರಾಜು ವಿರುದ್ಧ ಕ್ರಮಕೈಗೊಳ್ಳುವ ಕುರಿತು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ಇನ್ನು ಜೈಲಿನಿಂದ ಹೊರಬರುತ್ತಿದ್ದಂತೆ ಮತ್ತೆ ತಮ್ಮ ವರಸೆ ತೋರಿರುವ  ಸಂಪತ್ ರಾಜು ನಾನು ಯಾರು ಎಂಬುದು ಮುಂದಿನ ದಿನದಲ್ಲಿ ಗೊತ್ತಾಗುತ್ತೆ ಎಂದಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕೈನಾಯಕರ ಜಗಳ ಬೀದಿಗೆ ಬಿದ್ದಿದ್ದು ಕಾಂಗ್ರೆಸ್ ನಲ್ಲಿ ದಲಿತ ಶಾಸಕನ ಸಂಕಷ್ಟಕ್ಕೆ ಬೆಲೆ ಬಂದಿಲ್ಲ. ಕೇವಲ ಒಂದು ಟಿಕೇಟ್ ಗಾಗಿ ಶಾಸಕರ ನಿವಾಸವನ್ನೆ ಸುಟ್ಟು ಹಾಕಿದ್ದರೂ ಕೈ ನಾಯಕರು ಕಂಡು ಕಾಣದಂತೆ ನಿಂತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

RELATED ARTICLES

Most Popular