ಪೆಟ್ರೋಲ್-ಡಿಸೇಲ್ ದರ ಸಂಕಷ್ಟ….! ಹೊರೆ ಇಳಿಸದ ರಾಜ್ಯ ಸರ್ಕಾರ…! ಹೊಸ ತೆರಿಗೆನೂ ಇಲ್ಲ ರಿಯಾಯತಿನೂ ಸಿಗಲ್ಲ..!!

ಬಿಸಿನಂತೆ ಕಾಯುತ್ತಲೇ ಏರುತ್ತಿರುವ ಪೆಟ್ರೋಲ್ –ಡಿಸೇಲ್ ದರ ಕಂಡು ಕಂಗೆಟ್ಟು ರಾಜ್ಯ ಬಜೆಟ್ ನಲ್ಲಿ ಏನಾದ್ರು ಸಿಹಿಸುದ್ದಿ ಸಿಗಬಹುದಾ ಅಂತ ಕಾಯ್ತಿದ್ದ ಜನರಿಗೆ ಸಿಎಂ ಬಿಎಸ್ವೈ ನಿರಾಸೆ ಮಾಡಿದ್ದಾರೆ. ಯಾವ ಹೊಸ ತೆರಿಗೆನೂ ಇಲ್ಲ ಎನ್ನುತ್ತ ಕೊರೋನಾ ಸಂಕಷ್ಟಕ್ಕೆ ಮರುಗಿದ ಸಿಎಂ ಯಾವ ರಿಯಾಯತಿನೂ ಇಲ್ಲ ಎನ್ನುವ ಮೂಲಕ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜ್ಯ ಸರ್ಕಾರ ಪೆಟ್ರೋಲ್-ಡಿಸೇಲ್ ಮಾರಾಟದ ಮೇಲೆ ವಿಧಿಸುತ್ತಿರುವ ಮಾರಾಟ ತೆರಿಗೆ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೇ ನಮ್ಮಲ್ಲೇ ಕಡಿಮೆ ಇದೆ ಎಂದಿರುವ ಬಿಎಸ್ವೈ, ದರ ಇಳಿಕೆಯ ಪ್ರಸ್ತಾಪವನ್ನೇ ತಳ್ಳಿ ಹಾಕಿದ್ದಾರೆ.

ರಾಜ್ಯದ ಜನರ ಸಂಕಷ್ಟವನ್ನು ಮನಗಂಡು ಸರ್ಕಾರ 2021-22 ರ ಬಜೆಟ್ ನಲ್ಲಿ ಪೆಟ್ರೋಲ್-ಡಿಸೇಲ್ ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲ. ಆದರೆ ಮಾರಾಟದ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಇಳಿಸುವ ಪ್ರಶ್ನೆಯೇ ಇಲ್ಲ ಎಂದಿದ್ದು, ರಿಲೀಫ್ ಸಿಗೋ ನೀರಿಕ್ಷೆಯಲ್ಲಿದ್ದ ವಾಹನ ಸವಾರರಿಗೆ ನಿರಾಸೆ ತಂದಿದೆ.

ದಕ್ಷಿಣ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಕಡಿಮೆ ಇದೆ ಎನ್ನುವ ಮೂಲಕ ಬಿಎಸ್ವೈ ಪೆಟ್ರೋಲ್-ಡಿಸೇಲ್ ಮೇಲಿನ ಮಾರಾಟ ತೆರಿಗೆ ಇಳಿಕೆ ಪ್ರಸ್ತಾಪವನ್ನೇ ತಳ್ಳಿ ಹಾಕಿದ್ದಾರೆ. ಆದರೆ  ಜನರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಹೊಸ ತೆರಿಗೆ ವಿಧಿಸುವುದಿಲ್ಲ ಎನ್ನುವ ಮೂಲಕ ಕೊಂಚ ಸಮಾಧಾನ ತಂದಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Comments are closed.