ಶಿವಲಿಂಗದ ಮೇಲೆ ಕಾಂಡೋಮ್ ಇರಿಸಿದ ಚಿತ್ರ ಟ್ವೀಟ್ : ನಟಿಯ ವಿರುದ್ದ ನೆಟ್ಟಿಗರ ಬಾರೀ ಆಕ್ರೋಶ

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಬಂಗಾಲಿ ನಟಿ ಸಾಯೋನಿ ಘೋಷ್​ ವಿರುದ್ದ ಕೇಳಿಬಂದಿದೆ. ನಟಿ ಮಾಡಿದ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಶಿವಲಿಂಗಕ್ಕೆ ಅಪಮಾನ ಮಾಡುವಂತಹ ಚಿತ್ರವನ್ನು ನಟಿ ಸಾಯೋನಿ ಘೋಷ್​ ಟ್ವೀಟ್​ ಮಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಲಿಂಗಕ್ಕೆ ಕಾಂಡೋಮ್​ ಹಾಕಿರುವ ಚಿತ್ರವನ್ನು ಬಳಸಿಕೊಂಡು ನಟಿ ಸಾಯೋನಿ ತಮ್ಮ ಅಧಿಕೃತ ಟ್ವಿಟರ್​ ಖಾತೆಯಿಂದ 2015ರಲ್ಲಿ ಶಿವರಾತ್ರಿ ಹಬ್ಬದಂದು ಮಾಡಿದ್ದು, ಈಗ ಮತ್ತೆ ಇದು ವೈರಲ್​ ಆಗುತ್ತಿದೆ.

ಆದರೆ ನಟಿ ಸಾಯೋನಿ ಈ ಟ್ವೀಟ್ ಮಾಡಿದ್ದು ನಾನಲ್ಲ, ಬದಲಾಗಿ ನನ್ನ ಖಾತೆ ಹ್ಯಾಕ್ ಆಗಿತ್ತು. ಯಾರೋ ಕಿಡಿಗೇಡಿಗಳು ಮಾಡಿದ್ದ ಕೃತ್ಯ ಎಂದು ಈ ಹಿಂದೆಯೇ ಸಾಯೋನಿ ಸ್ಪಷ್ಟನೆ ನೀಡಿದ್ದರು.

ಆದರೆ ನೆಟ್ಟಿಗರು ಮಾತ್ರ ನಟಿ ಸಾಯೋನಿ ಹೇಳಿಕೆಯನ್ನು ಒಪ್ಪುವುದಕ್ಕೆ ಸಿದ್ದರಿಲ್ಲ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದು ನಂತರದಲ್ಲಿ ಹ್ಯಾಕ್ ಆಗಿದೆ ಅಂತಾ ಕಟ್ಟು ಕಥೆಯನ್ನು ಹೆಣೆಯುತ್ತಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೇ ನಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಟಿ ಈ ಹಿಂದೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದು. ಈ ಕುರಿತು ನಟಿಯ ವಿರುದ್ದ ದೂರು ದಾಖಲಾಗಿತ್ತು.

Comments are closed.