ಬಗೆದಷ್ಟು ಬಯಲಾಗ್ತಿದೆ ಸಿಡಿ ರಹಸ್ಯ…! 6 ಸಚಿವರ ಬಳಿಕ ಕೋರ್ಟ್ ಮೊರೆ ಹೋಗಲಿದ್ದಾರೆ ಮತ್ತಷ್ಟು ಶಾಸಕ-ಸಚಿವರು..!!

ಕರ್ನಾಟಕದಲ್ಲಿ ಏರುತ್ತಿರುವ ತಾಪಮಾನಕ್ಕಿಂತ ಹೆಚ್ಚು ಸದ್ದು ಮಾಡ್ತಿದೆ ಕಾಮಕಾಂಡ ಸಿಡಿ. 6 ಸಚಿವರ ಬಳಿಕ ಇನ್ನು 26 ಜನರು ಸಿಡಿ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, 50 ಜನಪ್ರತಿನಿಧಿಗಳ ಸಿಡಿ ಬಿಡುಗಡೆಗೆ ಸಿದ್ಧವಾಗಿದೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ರಾಜ್ಯ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ, ಸಿಡಿದ ಬಳಿಕ ಮುಂಬೈ ತಂಡದ 6 ಸಚಿವರು ತಮ್ಮ  ವಿರುದ್ಧ ಯಾವುದೇ ಮಾನಹಾನಿ ವರದಿ ಪ್ರಕಟಿಸದಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದರ ಬೆನ್ನಲ್ಲೇ 26 ಜನಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗೋ ಸಾಧ್ಯತೆಗಳಿದ್ದು ಮಾಜಿಸಿಎಂ ಸೇರಿದಂತೆ 50 ಜನರ ಸಿಡಿ ಬಿಡುಗಡೆಗೆ ಸಿದ್ಧವಾಗಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ನಮಗೆ ರಾಜಕೀಯ ಬದುಕಿನ ಹೊರತಾದ ವೈಯಕ್ತಿಕ ಬದುಕಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದರೇ, ನಮ್ಮ ವಿರುದ್ಧ ಯಾವುದೇ ಮಾನಹಾನಿ ಮಾಡಬಾರದು ಎಂಬ ಕಾರಣಕ್ಕೆ ಮೊದಲೇ ಸ್ಟೇ ಪಡೆದಿದ್ದೇವೆ ಎಂದು ನಾರಾಯಣ ಗೌಡ್ ಹೇಳಿದ್ದಾರೆ.

ಆದರೆ ಮೂಲಗಳ ಪ್ರಕಾರ ಮುಂಬೈ ಸೇರಿದ್ದ ಕಾಂಗ್ರೆಸ್-ಜೆಡಿಎಸ್ ವಲಸಿಗ ಶಾಸಕರು ಸೇರಿದಂತೆ ರಾಜ್ಯದ ಹಲವು ಪ್ರಭಾವಿಗಳ ರಾಜಕಾರಣಿಗಳ ಕಾಮಕಾಂಡದ ಒಟ್ಟು 50 ಕ್ಕೂ ಹೆಚ್ಚು ವಿಡಿಯೋಗಳು ರಿಲೀಸ್ ಗೆ ಸಿದ್ಧವಾಗಿದೆ ಎನ್ನಲಾಗಿದೆ. ಹೀಗಾಗಿ ಸೋಮವಾರದ ವೇಳೆಗೆ  ಮಾನಹಾನಿ ಮಾಡದಂತೆ ತಡೆಯಾಜ್ಷೆ ಕೋರಿ ಇನ್ನಷ್ಟು ಅರ್ಜಿಗಳು ನ್ಯಾಯಾಲಯದ ಮುಂದೆ ಬರೋ ಸಾಧ್ಯತೆ ಇದೆ.

ಈ ಮಧ್ಯೆ ಡಾ.ಸುಧಾಕರ್, ಬಿ.ಸಿ.ಪಾಟೀಲ್ಭೈ,ರತಿ ಬಸವರಾಜು, ನಾರಾಯಣ ಗೌಡ್, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಸಚಿವರು ಸಿಡಿ ರಿಲೀಸ್ ಗೆ ಇಂಜಂಕ್ಷನ್ ಆರ್ಡರ್ ಪಡೆದಿರೋದು ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದು,  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಬಿಜೆಪಿಯಿಂದ  ವರದಿ ಕೇಳಿದ್ದಾರೆ ಎನ್ನಲಾಗಿದೆ.

Comments are closed.