ವಿವಾಹಿತ ತಂಗಿಯ ಮೇಲೆಯೇ ಅತ್ಯಾಚಾರವೆಸಗಿದ ಅಣ್ಣ : ವಿಡಿಯೋ ಚಿತ್ರೀಕರಿಸಿ ಬೆದರಿಕೆ

ಉತ್ತರಪ್ರದೇಶ : ಪಾಪಿ ಅಣ್ಣನೋರ್ವ ತನ್ನ ಸಹೋದರಿಯನ್ನೇ ಅತ್ಯಾಚಾರವೆಸಗಿದ್ದಾನೆ. ಮಾತ್ರವಲ್ಲದೇ ಅತ್ಯಾಚಾರದ ದೃಶ್ಯವನ್ನು ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಘಟನೆ ಉತ್ತರ ಪ್ರದೇಶ ಮೊರಾದಾಬಾದ್ ನಲ್ಲಿ ನಡೆದಿದೆ.

ಪತಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಆಕೆಯ ಅಣ್ಣ ಹಾಗೂ ಸಹೋದರ ಪಾನಮತ್ತರಾಗಿ ಮನೆಗೆ ಬಂದಿದ್ದಾರೆ. ಈ ವೇಳೆಯಲ್ಲಿ ಅಣ್ಣನೇ ತನ್ನ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಣ್ಣನ ಸ್ನೇಹಿತ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಚಾರವನ್ನು ಬಾಯ್ಬಿಟ್ಟರೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.

ದಿನೇ ದಿನೇ ಸಹೋದರನ ಕಿರುಕುಳ ಹೆಚ್ಚುತ್ತಿದ್ದಂತೆಯೇ ತನ್ನ ಪತಿಗೆ ವಿಚಾರವನ್ನು ತಿಳಿಸಿದ್ದಾಳೆ. ಆದರೆ ಸಂಬಂಧಿಕರು ಮಾನಕಂಜಿ ದೂರು ನೀಡದಂತೆ ಒತ್ತಡವನ್ನು ಹೇರಿದ್ದಾರೆ. ಆದರೆ ಪತಿಯ ಸಹಾಯದಿಂದ ಮಹಿಳೆಯ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 376, 452 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋ ಚಿತ್ರೀಕರಣ ಮಾಡಿ ಸ್ನೇಹಿತನ ವಿರುದ್ದವೂ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

Comments are closed.