ಎಸ್ಐಟಿ ತನಿಖೆ ನಂಬೋಕಾಗಲ್ಲ…! ನಿರ್ಭೀತ ತನಿಖೆಗಾಗಿ ಹೈಕೋರ್ಟ್ ಮೇಟ್ಟಿಲೇರುತ್ತೇವೆ ಎಂದ ಸಿಡಿಲೇಡಿ ವಕೀಲರು..!!

ರಾಜ್ಯದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ನಿರ್ಭೀತ ತನಿಖೆಗಾಗಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕೆಂದು ಆಗ್ರಹಿಸಿರುವ ಲೇಡಿ ಪರ ವಕೀಲರು ಸೋಮವಾರ ಹೈಕೋರ್ಟ್ ಮೆಟ್ಟಿಲೇರೋದಾಗಿ ಎಚ್ಚರಿಕೆ ನೀಡಿದ್ದಾರೆ.

 ಸಿಡಿ ಪ್ರಕರಣದಲ್ಲಿ ಸಂತ್ರಸ್ಥ  ಯುವತಿ ನಿನ್ನೆ ನಗರ ಪೊಲೀಸ್ ಆಯುಕ್ತರಿಗೆ ಘಟನೆಯ ಸಂಪೂರ್ಣ ವಿವರವುಳ್ಳ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಅಲ್ಲದೇ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವಭಯವಿದ್ದು, ನನ್ನ ಕುಟುಂಬ ನನ್ನ ಕಣ್ಮುಂದೆ ಇದ್ದಾಗ ಪಾತ್ರ ನಾನು ಹೇಳಿಕೆ ನೀಡೋದು ಎಂದು ಪಟ್ಟು ಹಿಡಿದಿದ್ದಾಳೆ.

ಇನ್ನೊಂದೆಡೆ ಪ್ರಕರಣದಲ್ಲಿ ಸಂತ್ರಸ್ಥ ಯುವತಿ ಪರ ವಕೀಲರಾದ ಜಗದೀಶ್ ಮಾತನಾಡಿದ್ದು, ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಒಂದು ಗಂಭೀರ ಪ್ರಕರಣ ದಾಖಲಾಗಿದೆ. ಆದರೆ ಆ ವ್ಯಕ್ತಿ ಸಾಕ್ಷಿಗಳಿಗೆ ಹಾಗೂ ಸರ್ಕಾರಕ್ಕೆ ಧಮಕಿ ಹಾಕುತ್ತಿದ್ದಾರೆ. ನನ್ನನ್ನು ಬಂಧಿಸಿದ್ರೇ ಸರ್ಕಾರವೇ ಉರುಳುತ್ತೆ ಎನ್ನುತ್ತಿದ್ದಾರೆ. ಇಂಥ ವಾತಾವರಣದಲ್ಲಿ ಹೇಗೆ ನಿರ್ಭೀತಿಯಿಂದ ತನಿಖೆ ಮಾಡಲು ಸಾಧ್ಯ ಎಂದು ಜಗದೀಶ್ ಪ್ರಶ್ನಿಸಿದ್ದಾರೆ.

ತಾನು ನೀಡಿದ ಬ್ಲಾಕ್ ಮೇಲ್ ಪ್ರಕರಣದ ತನಿಖೆ ಮೊದಲು ಆಗಬೇಕು. ಅದನ್ನು ಬಿಟ್ಟು ಯುವತಿ ನೀಡಿದ ದೂರಿನ ವಿಚಾರಣೆಗೆ ಅಥವಾ ನನ್ನ ಬಂಧನಕ್ಕೆ ಬಂದ್ರೇ ಸರ್ಕಾರವೇ ಉರುಳುತ್ತೆ ಎಂದು ರಮೇಶ್ ಜಾರಕಿಹೊಳಿ ಬೆದರಿಸುತ್ತಿದ್ದಾರೆ. ಹೀಗಾದ್ರೆ ಯುವತಿಗೆ ರಕ್ಷಣೆ ಹಾಗೂ ನ್ಯಾಯ ಸಿಗಲು ಹೇಗೆ ಸಾಧ್ಯ. ಹೀಗಾಗಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ ನಿಶಪಕ್ಷಪಾತ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಅಲ್ಲದೇ ಸರ್ಕಾರ ಹಾಗೂ ರಮೇಶ್ ಜಾರಕಿಹೊಳಿ ಪ್ರಭಾವದಿಂದ ಕಬ್ಬನ್ ಪಾರ್ಕ್ ಹಾಗೂ ಎಸ್ ಐಟಿ ಪೊಲೀಸರು ಸೂಕ್ತ ತನಿಖೆ ನಡೆಸುವ ಭರವಸೆ ಇಲ್ಲ. ಹೀಗಾಗಿ ಸೋಮವಾರ ನಾವು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಹೈಕೋರ್ಟ್ ಕಣ್ಗಾವಲಿನಲ್ಲಿ ತನಿಖೆ ನಡೆಸಲು ಮನವಿ ಮಾಡುತ್ತೇವೆ ಎಂದಿದ್ದಾರೆ.

ಇನ್ನೊಂದೆಡೆ ಯುವತಿ ಲಿಖಿತ ದೂರು ನೀಡಿದ ಬೆನ್ನಲ್ಲೇ ಯುವತಿಯದ್ದು ಎನ್ನಲಾದ ಮತ್ತೊಂದು ಆಡಿಯೋ ಬಹಿರಂಗವಾಗಿದ್ದು, ಅದರಲ್ಲಿ ಡಿಕೆಶಿ ಹೆಸರು ಉಲ್ಲೇಖಿಸಲಾಗಿದೆ. ಪತ್ರಕರ್ತ ನರೇಶ್ ಹೇಳಿಕೆಯ ಮೇರೆಗೆ ನಾನು ಡಿಕೆಶಿ ಭೇಟಿಗೆ ಹೋಗಿದ್ದೆ ಎಂದು ಯುವತಿ ಹೇಳಿದ್ದಾನೆ. ಒಟ್ಟಿನಲ್ಲಿ ಸಿಡಿ ಪ್ರಕರಣ ಪ್ರತಿಕ್ಷಣ ಸಿನಿಮಯ ತಿರುವು ಪಡೆದುಕೊಳ್ಳುತ್ತಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

Comments are closed.