Covid 19 : ರಾಜ್ಯದಲ್ಲಿಂದು 48,049 ಮಂದಿಗೆ ಕೊರೊನಾ ಸೋಂಕು ಧೃಡ: 22 ಮಂದಿ ಸಾವು

Covid 19 : ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ರುದ್ರ ನರ್ತನ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 48,088 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್​ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ಇನ್ನು ರಾಜಧಾನಿ ಬೆಂಗಳೂರಲ್ಲೊಂದರಲ್ಲೇ ಒಂದೇ ದಿನದಲ್ಲಿ 29,068 ಹೊಸ ಕೋವಿಡ್​ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ 48 ಸಾವಿರಕ್ಕೂ ಅಧಿಕ ಹೊಸ ಕೋವಿಡ್​ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪಾಸಿಟಿವಿಟಿ ದರ 19.23 ಪ್ರತಿಶತಕ್ಕೆ ತಲುಪಿದೆ ಎಂದು ಟ್ವಿಟರ್​ನಲ್ಲಿ ಸಚಿವ ಡಾ.ಕೆ ಸುಧಾಕರ್​ ಮಾಹಿತಿ ನೀಡಿದ್ದಾರೆ.


ಇನ್ನು ಇದರ ಜೊತೆಯಲ್ಲಿ ರಾಜ್ಯದಲ್ಲಿಂದು 18,115 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 3,23,143 ಸಕ್ರಿಯ ಪ್ರಕರಣಗಳು ಇವೆ ಎನ್ನಲಾಗಿದೆ. ಇದರಲ್ಲಿ 22300 ಸಕ್ರಿಯ ಪ್ರಕರಣಗಳು ಬೆಂಗಳೂರಿನಲ್ಲಿಯೇ ಇವೆ ಎಂದು ಸಚಿವ ಸುಧಾಕರ್​ ಟ್ವೀಟಾಯಿಸಿದ್ದಾರೆ. ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 22 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಆರು ಮಂದಿ ಬೆಂಗಳೂರಿನಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದರೂ ಕೂಡ ಜಿಲ್ಲೆಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ತುಮಕೂರಿನಲ್ಲಿ 2021, ಹಾಸನ 1889, ಮಂಡ್ಯ 1506, ಉಡುಪಿ 1018, ಬೆಂಗಳೂರು ಗ್ರಾಮಾಂತರ 1036, ಕಲಬುರಗಿ 1164 ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ರೆ, ಉಳಿದಂತೆ ಚಾಮರಾಜನಗರ, ಬೆಳಗಾವಿ, ಬಳ್ಳಾರಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಕೋಲಾರ, ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಐನೂರಕ್ಕೂ ಅಧಿಕ ಪ್ರಕರಣ ದೃಢಪಟ್ಟಿದೆ.

ಇದನ್ನೂ ಓದಿ : Coronavirus pandemic : ದೇಶದಲ್ಲಿ 3 ಲಕ್ಷ ಗಡಿದಾಟಿದ ದೈನಂದಿನ ಕೋವಿಡ್​ ಪ್ರಕರಣ

ಇದನ್ನು ಓದಿ : India Ban International flights : ಭಾರತದಲ್ಲಿ ಫೆಬ್ರವರಿ 28 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್‌

karnataka reports 48,049 new covid 19 cases

Comments are closed.