Utpal Parrikar : ಮಾಜಿ ಸಿಎಂ ಪುತ್ರನಿಗೆ ಬಿಜೆಪಿ ಟಿಕೇಟ್ ಇಲ್ಲ: ಸ್ವತಂತ್ರವಾಗಿ ಕಣಕ್ಕಿಳಿಯಲು ನಿರ್ಧರಿಸಿದ ಉತ್ಪಲ್ ಪರಿಕ್ಕರ್

ಪಣಜಿ : ಉತ್ತರ ಪ್ರದೇಶದ ಬಳಿಕ ಗೋವಾ ಬಿಜೆಪಿಗೆ ಚುನಾವಣಾ ಕಂಟಕ ಎದುರಾಗಿದೆ. ಗೋವಾ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗೋವಾ ಬಿಜೆಪಿಯ ಆಂತರಿಕ ಭಿನ್ನಮತ ಬಯಲಾಗತೊಡಗಿದ್ದು ಟಿಕೇಟ್ ನಿರಾಕರಿಸಿದ ಕಾರಣಕ್ಕೆ ಗೋವಾ ಮಾಜಿ ಸಿಎಂ ದಿ.ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್‌ ಪರಿಕ್ಕರ್‌ ( Utpal Parrikar ) ಬಿಜೆಪಿ ತೊರೆದಿದ್ದಾರೆ. ಮಾತ್ರವಲ್ಲ ಚುನಾವಣೆ ಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಬಿಜೆಪಿ ಯಲ್ಲಿ ಸಕ್ರಿಯರಾಗಿದ್ದ ಉತ್ಪಲ್ ಪರಿಕ್ಕರ್ 2019 ರಿಂದ ತಂದೆ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಪಣಜಿ ಕ್ಷೇತ್ರದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಇದಕ್ಕೆ ಬಿಜೆಪಿ ಸ್ಪಂದಿಸಿರಲಿಲ್ಲ. ಬಿಜೆಪಿ ಉತ್ಪಲ್ ಪರಿಕ್ಕರ್ ಗೆ ತಂದೆಯ ಪಣಜಿ ಕ್ಷೇತ್ರದ ಟಿಕೇಟ್ ನೀಡಲು ನಿರಾಕರಿಸಿತ್ತು. ಅಲ್ಲದೇ ಔಪಚಾರಿಕವಾಗಿ ಉತ್ತರ ಗೋವಾದ ಬಿಚೋಲಿಮ್ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡುವುದಾಗಿ ಘೋಷಿಸಿತ್ತು. ಈ ಬಿಚೋಲಿಮ್ ಕ್ಷೇತ್ರವನ್ನು ಉತ್ಪಲ್ ನೀಡಲಾಗಿದೆ ಎಂದು ಗೋವಾ ಬಿಜೆಪಿ ಉಸ್ತುವಾರಿ ದೇವೇಂದ್ರ್ ಫಡ್ನವಿಸ್ ಬುಧವಾರವಷ್ಟೇ ಘೋಷಿಸಿದ್ದರು. ಆದರೆ ಈ ಪ್ರಸ್ತಾಪವನ್ನು ನಿರಾಕರಿಸಿರುವ ಉತ್ಪಲ್ ಪರಿಕ್ಕರ್ ಬಿಜೆಪಿಯಿಂದ ಹೊರನಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಆದರೆ ಉತ್ಪಲ್ ಈ‌ ನಿರ್ಧಾರವನ್ನು ಬದಲಾಯಿಸುವಂತೆ ಬಿಜೆಪಿ ನಾಯಕರ್ಯಾರು ಮನವೊಲಿಸಲು‌ ಮುಂದಾಗಿಲ್ಲ.‌ಬದಲಾಗಿ ಉತ್ಪಲ್ ನಿರಾಕರಿಸಿದ ಬಿಚೋಲಿಮ್ ಕ್ಷೇತ್ರವನ್ನು ವಿಧಾನಸಭಾ ಸ್ಪೀಕರ್ ರಾಜೇಶ್ ಪಾಟ್ನೇಕರ್ ಗೆ ನೀಡಿದೆ. ಅಲ್ಲದೇ ಈ ಕ್ಷೇತ್ರದಿಂದ ಗೆಲ್ಲುವ ರಾಜೇಶ್ ಪಾಟ್ನೇಕರ್ ಸರ್ಕಾರದ ಮುಂದಿನ ಕ್ಯಾಬಿನೇಟ್ ಸಚಿವ ಎಂದೂ ಬಿಜೆಪಿ ಕೊಂಡಾಡಿದೆ. ಈ ಹಿಂದೆ ಅನಾರೋಗ್ಯದ ಕಾರಣದಿಂದ ರಾಜೇಶ್ 2022 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು.

ಆದರೆ ಬಿಜೆಪಿ ಅವರನ್ನು ಮನವೊಲಿಸಿದೆ. ಆದರೆ ಬಿಜೆಪಿ ಸಿಎಂ‌ ಆಗಿದ್ದ ಮನೋಹರ ಪರಿಕ್ಕರ್ ಪುತ್ರನನ್ನು ಉಳಿಸಲು ಸರ್ಕಸ್ ಮಾಡಿಲ್ಲ. ಉತ್ಪಲ್ ಪರಿಕ್ಕರ್ 2022 ರ ಚುನಾವಣೆ ಯಲ್ಲಿ ಸ್ಪರ್ಧಿಸೋದು ಬಹುತೇಕ ಖಚಿತವಾಗಿದ್ದು ಪಣಜಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಹೇಳಿದ್ದಾರೆ. ಕೇವಲ ಉತ್ಪಲ್ ಪರಿಕ್ಕರ್ ಮಾತ್ರವಲ್ಲ ಮಾಜಿ ಮುಖ್ಯಮಂತ್ರಿ ಲಕ್ಷ್ಕೀಕಾಂತ್ ಪರ್ಸೇಕರ್ ಗೂ ಬಿಜೆಪಿ ಟಿಕೇಟ್ ನೀಡಿಲ್ಲ. ಹೀಗಾಗಿ ಅವರು ಮಾಂಡ್ರೆಮ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇನ್ನು ಉತ್ಪಲ್ ಪರಿಕ್ಕರ್ ನ್ನು ಆಪ್ ಪಕ್ಷ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದು, ಸ್ವತಃ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉತ್ಪಲ್ ಅವರನ್ನು ಮೊನ್ನೆಯಷ್ಟೇ ಆಪ್ ಪಕ್ಷಕ್ಕೆ ಆಹ್ವಾನಿಸಿದ್ದರು.‌

ಇದನ್ನೂ ಓದಿ : weekend Curfew canceled : ಕರ್ನಾಟಕದಲ್ಲಿ ವೀಕೆಂಡ್‌ ಕರ್ಪ್ಯೂ ರದ್ದು, ಜ.29 ರ ವರೆಗೆ ಬೆಂಗಳೂರಿನ ಶಾಲೆ ಬಂದ್‌

ಇದನ್ನೂ ಓದಿ : Most Popular World Leader : ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ ಪ್ರಧಾನಿ ಮೋದಿ

( Manohar Parrikar’s son Utpal Parrikar resigns from BJP, contest as independent candidate in Goa Assembly election)

Comments are closed.