ಕೊಪ್ಪ : ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಅಮೂಲ್ಯ ಲಿಯೋನ್ ಪೋಷಕರು ವಾಸವಿದ್ದ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರದಲ್ಲಿರುವ ಅಮೂಲ್ಯ ಮನೆ ಮೇಲೆ 25ಕ್ಕೂ ಅಧಿಕ ಯುವಕರ ಗುಂಪು ದಾಳಿ ನಡೆಸಿದ್ದು, ಮನೆಯ ಕಿಟಕಿ, ಗಾಜುಗಳು ಪುಡಿ ಪುಡಿಯಾಗಿದೆ.

ದಾಳಿಯ ಹಿನ್ನೆಲೆಯಲ್ಲಿ ಅಮೂಲ್ಯ ತಂದೆ ವಾಜಿ ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು ಐಪಿಸಿ 143, 144, 148, 447, 427, 504, 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದಾಳಿಯ ಹಿನ್ನೆಲೆಯಲ್ಲಿ ವಾಜಿ ಅವರ ಮನೆಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಅಮೂಲ್ಯ ಪೋಷಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.