4 ತಿಂಗಳಲ್ಲಿ 877 ಶಿಶು ಮರಣ, 61 ಗರ್ಭಿಣಿಯರ ಸಾವು !

0

ಮೇಘಾಲಯ : ಕೊರೊನಾ ವೈರಸ್ ಸೋಂಕು ತಂದ ಅವಾಂತರ ಅಷ್ಟಿಷ್ಟಲ್ಲಾ. ಕಳೆದ ನಾಲ್ಕೇ ನಾಲ್ಕು ತಿಂಗಳಲ್ಲಿ ರಾಜ್ಯವೊಂದರಲ್ಲಿ ಬರೋಬ್ಬರಿ 877 ನವಜಾತ ಶಿಶುಗಳು ಮರಣ ಹೊಂದಿದ್ದರೆ, 6 ಮಂದಿ ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಇಂತಹ ಆಘಾತಕಾರಿ ಘಟನೆಗೆ ಕಾರಣವಾಗಿರೋದು ನ್ಯುಮೋನಿಯಾ.

ಹೌದು, ಕೊರೊನಾ ಸೋಂಕು ಕಾಣಿಸಿಕೊಂಡ ನಂತರದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವುದು ದುಸ್ಥರವಾಗಿದೆ. ಹೀಗಾಗಿಯೇ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅದೆಷ್ಟೋ ಮಂದಿ ಸರಿಯಾದ ಸಮಯಕ್ಕೆ ಔಷಧಿ ಸಿಗದೆ ಪರದಾಡಿದ್ದಾರೆ. ಮಾತ್ರವಲ್ಲ ಇಂದಿಗೂ ಪರದಾಡುತ್ತಲೇ ಇದ್ದಾರೆ. ಅದ್ರಲ್ಲೂ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗೆ ಕೊರೊನಾ ಹೆಮ್ಮಾರಿ ಆತಂಕವನ್ನು ತಂದೊಡ್ಡುತ್ತಿದೆ.


ಕೊರೊನಾ ಹೆಮ್ಮಾರಿಯಿಂದಾಗಿ ಮೇಘಾಲಯ ತತ್ತರಿಸಿ ಹೋಗಿದೆ. ಮಾತ್ರವಲ್ಲ ಮೇಘಾಲಯದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಡೆದಿರುವ ಘಟನೆ ಇದೀಗ ಜನರನ್ನು ಬೆಚ್ಚಿ ಬೀಳಿಸಿದೆ. ಕಳೆದ 4 ತಿಂಗಳಲ್ಲಿ ಅಂದರೆ ಏಪ್ರಿಲ್​​ನಿಂದ ಇಲ್ಲಿಯವರೆಗೆ 61 ಗರ್ಭಿಣಿಯರು ಮತ್ತು 877 ನವಜಾತ ಶಿಶುಗಳು ಮೃತಪಟ್ಟಿವೆ.

ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೇ ಈ ಘಟನೆ ನಡೆದಿದೆ ಎಂದು ಮೇಘಾಲಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೇಘಾಲಯ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿದ್ದರೂ ಕೂಡ ಶಿಶು ಹಾಗೂ ತಾಯಿಯ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಲವು ಗರ್ಭಿಣಿಯರು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಶಿಶು ಮರಣದ ಸಂಖ್ಯೆ ಹೆಚ್ಚಳವಾಗೋದಕ್ಕೆ ಕಾರಣವಾಗಿರೋದು ನ್ಯುಮೋನಿಯಾದ ಜೊತೆಗೆ ಉಸಿರುಗಟ್ಟುವಿಕೆಯ ಸಮಸ್ಯೆ. ಮೇಘಾಲಯವೊಂದರಲ್ಲಿಯೇ ಸಾವಿರ ಶಿಶುಗಳ ಪೈಕಿ 34 ಶಿಶುಗಳು ಸಾವನ್ನಪ್ಪುತ್ತಿವೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ವಾಸಿಸುವ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುತ್ತಿಲ್ಲ.

ಇನ್ನು ಕೊರೊನಾ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಗರ್ಭಿಣಿಯರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮರಣ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಸರಕಾರ ಮೇಘಾಲಯದಲ್ಲಿ ಶಿಶು ಹಾಗೂ ಗರ್ಭಿಣಿ ಮಹಿಳೆಯರ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಮರಣ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವು ತರಿಸಿದೆ.

Leave A Reply

Your email address will not be published.