ಲೆಮನ್ಗ್ರಾಸ್(Lemongrass Benefits) ನಿಂಬೆ ಹುಲ್ಲು ಅಥವಾ ಮಜ್ಜಿಗೆ ಹುಲ್ಲಿನಿಂದ ಚರ್ಮ ಮತ್ತು ಕೂದಲಿಗೆ (Hair and Skin) ಹಲವಾರು ಪ್ರಯೋಜನಗಳಿದೆ. ಇದು ಒಂದು ಪ್ರಬಲವಾದ ಕ್ಲಿನ್ಸರ್ (cleanser) ಆಗಿದೆ. ಮತ್ತು ಚರ್ಮದ ರಂದ್ರಗಳಲ್ಲಿರುವ ಕಲ್ಮಶ ಮತ್ತು ಕೊಳಕುಗಳನ್ನು ತೆಗೆದುಹಾಕುತ್ತದೆ. ಸಿಟ್ರಸ್ ಪರಿಮಳ ಹೊಂದಿರುವ ಇದು ಚರ್ಮ ಮತ್ತು ಕೂದಲಿಗೆ ಅತ್ಯತ್ತಮವಾಗಿದೆ. ಆಯುರ್ವೇದದಲ್ಲಿ ಲೆಮನ್ಗ್ರಾಸ್ ಎಣ್ಣೆಯು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ.
ಎಸೆನ್ಶಿಯಲ್ ಆಯಲ್ (Essential oil ) ದೇಹ ಮತ್ತು ಮನಸ್ಸನ್ನು ಉತ್ತೇಜಿಸಲು ಉಪಯೋಗಿಸಲಾಗುತ್ತದೆ. ಇದು ತಲೆನೋವನ್ನು ನಿವಾರಿಸುವುದರಿಂದ ಹಿಡಿದು ಕೂದಲಿನ ಬೆಳವಣಿಗೆ ಮತ್ತು ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಈ ತೈಲವು ಅರೋಮಾಥೆರಪಿಗಿಂತ ಹೆಚ್ಚಿನ ಮಹತ್ವ ಕಂಡುಕೊಂಡಿದೆ.
ಲೆಮನ್ಗ್ರಾಸ್ ಆಯಲ್ನ ಪ್ರಯೋಜನಗಳು :
- ಚರ್ಮದ ಮೇಲೆ ಉತ್ಪತ್ತಿಯಾಗುವ ಎಣ್ಣೆಯನ್ನು ಕಡಿಮೆ ಮಾಡಲು:
ಮುಖದ ಮೇಲಿನ ಹೆಚ್ಚುವರಿ ಎಣ್ಣೆಯು ಧೂಳು ಮತ್ತು ಕಲ್ಷಶಗಳನ್ನು ಆಕರ್ಷಿಸತ್ತದೆ. ಇದು ಮೊಡವೆಗಳಿಗೆ ಕಾರಣವಾಗುತ್ತದೆ. ಲೆಮನ್ಗ್ರಾಸ್ ಎಣ್ಣೆಯನ್ನು ಬಳಸುವುದರಿಂದ ಚರ್ಮದ ಮೇಲೆ ಉತ್ಪತ್ತಿಯಾಗುವ ಎಣ್ಣೆಯನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಮೇಲಿನ ರಂದ್ರಗಳನ್ನು ಕಡಿಮೆ ಮಾಡಿ ಚರ್ಮವನ್ನು ಬಿಗಿಗೊಳಿಸುತ್ತದೆ. - ತಲೆಹೊಟ್ಟು ನಿವಾರಿಸಲು :
ಲೆಮನ್ಗ್ರಾಸ್ ಎಸನ್ಶಿಯಲ್ ಆಯಿಲ್ ಅನ್ನು ತಲೆಹೊಟ್ಟು ಕಡಿಮೆ ಮಾಡಲು ಮತ್ತು ಹೊಟ್ಉ ಮುಕ್ತ ಆರೋಗ್ಯಕರ ನೆತ್ತಿಯನ್ನು ಪಡೆಯಲು ಸಹಾಯ ಮಾಡುವುದು. ಆಂಟಿಫಂಗಲ್ ಅಂಶವು ಹೇರಳವಾಗಿರುವುದರಿಂದ ತುರಿಕೆ ಕಡಿಮೆ ಮಾಡಿ ಹೊಟ್ಟು ಉದುರದಂತೆ ತಡೆಯುತ್ತದೆ. ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಆಧಾರಿತ ಸೋಂಕಿನ ಬೆಳವಣಿಗೆಯನ್ನು ತಡೆಯುತ್ತದೆ. ನಿಮ್ಮ ಶಾಂಪೂ ಅಥವಾ ಕಂಡಿಷನರ್ಗೆ ಕೆಲವು ಹನಿ ಲೆಮನ್ಗ್ರಾಸ್ ಎಣ್ಣೆಯನ್ನು ಸೇರಿಸಿ ಅದನ್ನು ಕೂದಲಿಗೆ ಹಚ್ಚಿ. ನಿಯಮಿತವಾದ ಬಳಕೆಯಿಂದ ಗಮನಾರ್ಹ ಬದಲಾವಣೆ ಸಾಧ್ಯ.
ಇದನ್ನೂ ಓದಿ : turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ
- ಉತ್ತಮ ಕೂದಲಿನ ಪೋಷಣೆಗೆ:
ಲೆಮನ್ಗ್ರಾಸ್ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತುರಿಕೆ ನಿವಾರಿಸುತ್ತದೆ. ಕೂದಲು ಉದುರುವುದನ್ನು ತಡೆದು, ಬೆಳೆಯಲು ಉತ್ತೇಜಿಸುತ್ತದೆ. ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಗೆ ಕೆಲವು ಹನಿ ಲೆಮನ್ಗ್ರಾಸ್ ಆಯಿಲ್ ಮಿಶ್ರಣ ಮಾಡಿ. ಅದನ್ನು ಕೂದಲಿನ ಬುಡಕ್ಕೆ ಹಚ್ಚಿ. ಕೂದಲಿನ ಬೆಳವಣಿಗೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಕಾಣಬಹುದು. - ಮೊಡವೆಗಳನ್ನು ತಡೆಯಲು :
ಇದರಲ್ಲಿಯ ಆಂಟಿಬ್ಯಾಕ್ಟೀರಿಯಲ್ ಗುಣವು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಉತ್ತಮ ಸಾಧನವಾಗಿದೆ. ಇದರ ಶಿದ್ಧೀಕರಿಸುವ ಗುಣವು ಚರ್ಮದ ಮೇಲಿನ ಕಲ್ಮಶಗಳನ್ನು ತೆಗೆದುಹಾಕಲು ಮತ್ತು ಚರ್ಮವನ್ನು ಶುದ್ಧೀಕರಿಸಿ ಸ್ವಚ್ಛದ ಅನುಭವ ನೀಡಲು ಸಹಾಯ ಮಾಡುತ್ತದೆ. ಪ್ರತಿದಿನವೂ ಉಗುರುಬೆಚ್ಚಗಿನ ನೀರಿಗೆ ಲೆಮನ್ಗ್ರಾಸ್ ಆಧಾರಿತ ಕ್ಲೆನ್ಸರ್ಅನ್ನು ಸೇರಿಸಿ ಮುಖ ತೊಳೆಯಿರಿ. ಇದು ತಕ್ಷಣ ರಂದ್ರಗಳಲ್ಲಿರುವ ಮೊಡವೆಗಳನ್ನು ಹೆಚ್ಚಿಸುವ ಬ್ಯಾಕ್ಟೀರಿಯಾ, ಡಾರ್ಕ್ಸ್ಪಾಟ್ ಕಲ್ಮಶ ಮತ್ತು ಕೀಟಾಣುಗಳನ್ನು ಹೋಗಲಾಡಿಸುವುದು. - ಹೇನುಗಳ ತೊಂದರೆ ನಿವಾರಿಸಲು :
ಲೆಮನ್ಗ್ರಾಸ್ ಎಸೆನ್ಶಿಯಲ್ ಎಣ್ಣೆಯ ವಿಶಿಷ್ಟ ಪರಿಮಳವು ತಲೆಯ ಹೇನು ನಿವಾರಿಸಲು ಬಹಳ ಪರಿಣಾಮಕಾರಿಯಾಗಿದೆ. ಬಾಚಣಿಕೆಗೆ ಕೆಲವು ಹನಿ ಲೆಮನ್ಗ್ರಾಸ್ ಎಣ್ಣೆಯನ್ನು ಹಾಕಿ. ಅದರಿಂದ ಕೂದಲನ್ನು ಬಾಚಿಕೊಳ್ಳಿ. ಕೆಲವು ಹನಿ ಲೆಮನ್ಗ್ರಾಸ್ ಎಣ್ಣೆಯೊಂದಿಗೆ ಬೇವಿನ ಎಣ್ಣೆಯನ್ನು ಬೆರೆಸಿ ಮಸಾಜ್ ಕೂಡಾ ಮಾಡಿಕೊಳ್ಳಬಹುದು.
ಇದನ್ನೂ ಓದಿ :Health Benefits of White Onion : ಬಿಳಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳು ಏನು ಎಂಬುದು ನಿಮಗೆ ಗೊತ್ತಾ?
(Lemongrass Benefits this essential oil is very useful for skin and hair)