Vijay: ಕಾರಿನ ಟ್ಯಾಕ್ಸ್ ಕಟ್ಟೋಕ್ಕಾಗಲ್ಲ ಎಂದ ನಟನಿಗೆ ಹೈಕೋರ್ಟ್ ಛೀಮಾರಿ….!!

ತೆರೆ ಮೇಲೆ ದೇಶಭಕ್ತಿ ಮಾತನಾಡೋ ನಾಯಕರು ಅಸಲಿ ಜೀವನದಲ್ಲಿ ಟ್ಯಾಕ್ಸ್ ಕಟ್ಟೋದಿಕ್ಕೂ ಹಿಂದೆ ಮುಂದೇ ನೋಡ್ತಾರೆ. ಹೀಗೆ ಟ್ಯಾಕ್ಸ್ ಕಟ್ಟೋಕಾಗದೇ ಹೈಕೋರ್ಟ್ ಮೆಟ್ಟಿಲೇರಿದ್ದ ನಟನಿಗೆ ಹೈಕೋರ್ಟ್ ಛೀಮಾರಿ ಹಾಕಿದ್ದು, ದಂಡ ವಿಧಿಸಿ ಬುದ್ಧಿ ಹೇಳಿದೆ.

ತಮಿಳಿನ ಫೇಮಸ್ ನಟ ವಿಜಯ್ ತಲಪತಿ ಗೆ ರೋಲ್ಸ್ ಕಾರಿನ ಕಟ್ಟೋ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲ ಟ್ಯಾಕ್ಸ್ ಕಟ್ಟಲು ಹಿಂದೇಟು ಹಾಕುವ ಪ್ರವೃತ್ತಿ ರಾಷ್ಟ್ರ ವಿರೋಧಿ ಮನಸ್ಥಿತಿ ಎಂದು ಟೀಕಿಸಿದೆ.

2012 ರಲ್ಲಿ ನಟ ವಿಜಯ್  ಇಂಗ್ಲೆಂಡ್ ನಿಂದ ರೋಲ್ಸ್ ರಾಯ್ ಕಾರನ್ನು ಇಂಪೋರ್ಟ್ ಮಾಡಿಕೊಂಡಿದ್ದರು.  ಈ ಕಾರಿಗಾಗಿ ವಿಜಯ್ ಲಕ್ಷರೂಪಾಯಿ ಮೇಲೆ ಟ್ಯಾಕ್ಸ್ ಕಟ್ಟಬೇಕಿತ್ತು. ಆದರೆ ಕೋಟ್ಯಾಂತರ ರೂಪಾಯಿ ಹಣ ಕೊಟ್ಟು ಕಾರು ಖರೀದಿಸಿದ ವಿಜಯ್ ಟ್ಯಾಕ್ಸ್ ಕಟ್ಟಲು ಸಿದ್ಧವಿರಲಿಲ್ಲ.

ಟ್ಯಾಕ್ಸ್ ಕಟ್ಟೋದನ್ನು ಪ್ರಶ್ನಿಸಿದ ವಿಜಯ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಲವು ವರ್ಷಗಳ ವಿಚಾರಣೆ ಬಳಿಕ ವಿಜಯ್ ಗೆ ನ್ಯಾಯಾಲಯ ಛೀಮಾರಿ ಹಾಕಿದ್ದು, ಟ್ಯಾಕ್ಸ್ ಪಾವತಿಸುವಂತೆ ಸೂಚಿಸಿರುವುದಲ್ಲದೇ, ವಿನಾಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದಕ್ಕಾಗಿ  1 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ.

ಒಟ್ಟಿನಲ್ಲಿ ತಮ್ಮ ರೋಲ್ಸ್ ರಾಯ್ ಕಾರಿಗೆ ತೆರಿಗೆ ವಿನಾಯ್ತಿ ಕೋರಲು ಹೋದ ವಿಜಯ್ ಗೆ ಹೈಕೋರ್ಟ್ ನಲ್ಲಿ ತೀವ್ರ ಮುಖಭಂಗವಾಗಿದೆ. ಈ ಹಿಂದೆ ತಮ್ಮ ಮಾಲಿಕತ್ವದ ಕಲ್ಯಾಣಮಂಪಟದ ಟ್ಯಾಕ್ಸ್ ಕಟ್ಟುವ ವಿಚಾರದಲ್ಲೂ ರಜನಿಕಾಂತ್ ಗೆ ನ್ಯಾಯಾಲಯ ಖಡಕ್ ಆದೇಶ ನೀಡಿತ್ತು.

Comments are closed.