BJP: ಬಿಜೆಪಿಗೆ ಬಿಗ್ ಶಾಕ್….! 12 ಬಿಜೆಪಿ ಎಮ್ಎಲ್ಎಗಳನ್ನು 1 ವರ್ಷದ ಅವಧಿಗೆ ಅಮಾನತ್ತುಗೊಳಿಸಿದ ಸ್ಪೀಕರ್….!!

ಆಘಾತಕಾರಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಸ್ಪೀಕರ್ ಜೊತೆ ನಿಯಮ ಮೀರಿ ನಡೆದುಕೊಂಡ ಕಾರಣಕ್ಕೆ 12 ಬಿಜೆಪಿ ಶಾಸಕರನ್ನು ಅಮಾನತ್ತುಗೊಳಿಸಿ ಮಹಾರಾಷ್ಟ್ರ ವಿಧಾನಸಭೆ ಆದೇಶ ಹೊರಡಿಸಿದೆ. ವಿಧಾನಸಭೆ ಸ್ಪೀಕರ್ ಜಿರ್ವಾಲ್ ನರಹರಿ ಸೀತಾರಾಮ್ ಈ ಆದೇಶ ಹೊರಡಿಸಿದ್ದಾರೆ.

12 ಬಿಜೆಪಿ ಶಾಸಕರನ್ನು ಒಂದು ವರ್ಷದ ಅವಧಿಗೆ ವಿಧಾನಸಭೆ ಪ್ರವೇಶಿಸದಂತೆ ಅಮಾನತ್ತುಗೊಳಿಸಲಾಗಿದ್ದು, ಈ ರಾಜಕೀಯ ಬೆಳವಣಿಗೆ ಇದೀಗ ದೇಶದ ಗಮನ ಸೆಳೆದಿದೆ.

ಮುಂಗಾರು ಅಧಿವೇಶನದ ವೇಳೆ ಸ್ಪೀಕರ್ ಜೊತೆ ಅನುಚಿತವಾಗಿ ವರ್ತಿಸಿದರೆಂಬ ಕಾರಣಕ್ಕೆ ಈ ಶಾಸಕರನ್ನು ಅಮಾನತ್ತುಗೊಳಿಸಲಾಗಿದೆ. ಸಂಜಯ್ ಕುಟೆ, ಆಶೀಸ್ ಸೇಲರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಕ್ತಾಲಕರ್, ಪರಾಗ್ ಅಲ್ವಾನಿ, ಹರೀಶ್ ಪಿಂಪ್ಲೆ, ಯೋಗೇಶ್ ಸಾಗರ್, ಜಯಕುಮಾರ್ ರಾವತ್,ನಾರಾಯಣ ಕುಚೆ, ರಾಮ್ ಸತ್ಪುತೆ,ಬಂಟಿ ಭಾಂಗಡಿಯಾ ಅಮಾನತ್ತುಗೊಂಡ ಶಾಸಕರು.

ಇನ್ನು ಸದನದ ಈ ನಿರ್ಧಾರವನ್ನು ಬಿಜೆಪಿ ಶಾಸಕರು ಖಂಡಿಸಿದ್ದು, ದೇವೆಂದ್ರ ಫಡ್ನವಿಸ್ ನಾಯಕತ್ವದ ಸದಸನ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ದೇವೆಂದ್ರ ಫಡ್ನವೀಸ್, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ  ಓಬಿಸಿ ಹಾಗೂ ಇತರ ಮೀಸಲಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ. ಇದನ್ನು ಪ್ರಶ್ನಿಸುವ ಬಿಜೆಪಿಯ ಸದಸ್ಯರ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ  ಈ ಅಮಾನತ್ತು ನಡೆದಿದೆ ಎಂದು ಆರೋಪಿಸಿದ್ದಾರೆ.

Comments are closed.