Second Puc:ದ್ವಿತೀಯ ಪಿಯುಸಿ ರಿಪೀಟರ್ಸ್ ಗೆ ಸಿಹಿಸುದ್ದಿ…! ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್….!!

ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ ಈಗ ರಿಪೀಟರ್ಸ್ ಗೂ ಸಿಹಿಸುದ್ದಿ ನೀಡಿದೆ.  ಶೇಕಡಾ 35 ರಷ್ಟು ಅಂಕಗಳೊಂದಿಗೆ ಎಲ್ಲಾ ರೀಪಿರ್ಟರ್ಸ್ ಗಳನ್ನು ಪಾಸ್ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ಕೊರೋನಾ ಎರಡನೇ ಅಲೆಯ ಸಂಕಷ್ಟದಿಂದಾಗಿ ಏಪ್ರಿಲ್-ಮೇ ಅಂತ್ಯಕ್ಕೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಅಲ್ಲದೇ ಎಸ್.ಎಸ್.ಎಲ್ ಸಿ ಹಾಗೂ ಪ್ರಥಮ ಪಿಯುಸಿ ಮಾರ್ಕ್ಸ್ ಆಧರಿಸಿ ದ್ವಿತೀಯ ಪಿಯುಸಿ ಫಲಿತಾಂಶ ನೀಡುವುದಾಗಿ ಘೋಷಿಸಿತ್ತು.

ಅಲ್ಲದೇ ದ್ವಿತೀಯ ಪಿಯುಸಿಯಲ್ಲಿ ಎಲ್ಲರನ್ನು ಪಾಸ್ ಮಾಡುವುದಾಗಿಯೂ ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ ಇದರಲ್ಲಿ ಈ ಹಿಂದೆ ಪರೀಕ್ಷೆಯಲ್ಲಿ ಪೇಲ್ ಆಗಿ ಮತ್ತೆ ಪರೀಕ್ಷೆ ಬರೆಯಲು ಸಿದ್ಧವಾಗಿರುವ ರಿಪೀಟರ್ಸ್ ವಿದ್ಯಾರ್ಥಿಗಳ ಉಲ್ಲೇಖವಿರಲಿಲ್ಲ.

ಹೀಗಾಗಿ ಪುನಃ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.ಇದೀಗ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರ, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಬೇಕಿರುವ ಎಲ್ಲ ರಿಪೀಟರ್ಸ್ ಗಳನ್ನು ಶೇಕಡಾ 35 ರಷ್ಟು ಅಂಕಗಳೊಂದಿಗೆ ಪಾಸ್ ಮಾಡುವುದಾಗಿ ಹೇಳಿದೆ.

ರೆಗ್ಯೂಲರ್ ವಿದ್ಯಾರ್ಥಿಗಳ ಫಲಿತಾಂಶ ಜುಲೈ ಅಂತ್ಯಕ್ಕೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೆ ಮತ್ತೆ ಪರೀಕ್ಷೆ ಕೂರಬೇಕಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಈಗಾಗಲೇ ಫಲಿತಾಂಶ ಘೋಷಣೆಯಾದಂತಾಗಿದ್ದು, ಎಲ್ಲಾ ರಿಪೀಟರ್ಸ್ ಗಳನ್ನು ಉತ್ತೀರ್ಣಗೊಳಿಸಿರುವ ಸರ್ಕಾರ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ.  

ಈ ನಿರ್ಧಾರಕ್ಕೂ ಮುನ್ನ ಸರ್ಕಾರ 12 ಜನ ತಜ್ಞರ ಸಮಿತಿ ರಚಿಸಿದ್ದು, ತಜ್ಞರು ಸಭೆ ನಡೆಸಿದ ಬಳಿಕ ಅಭಿಪ್ರಾಯ ಪಡೆದು ವಿದ್ಯಾರ್ಥಿಗಳನ್ನು ಪಾಸ್ ಮಾಡುವ ನಿರ್ಧಾರಕ್ಕೆ ಬಂದಿದೆ ಸರ್ಕಾರ.

Comments are closed.