IPL : ಐಪಿಎಲ್‌ನಲ್ಲಿ ನಡೆಯುತ್ತೆ ಮಹಾ ಹರಾಜು : ಎರಡು ತಂಡಗಳ ಸೇರ್ಪಡೆ

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ದುಬೈಗೆ ಶಿಫ್ಟ್ ಅಗಿದೆ. ಉಳಿದ ಪಂದ್ಯ ಗಳನ್ನು ನಡೆಸಲು ಬಿಸಿಸಿಐ ಸಿದ್ದತೆ ನಡೆಸಿದೆ. ಈ ನಡುವಲ್ಲೇ ಐಪಿಎಲ್ ಗೆ ಹೊಸ ತಂಡ, ಆಟಗಾರರ ಹರಾಜಿಗೆ ಸಿದ್ದತೆ ನಡೆಯುತ್ತಿದೆ.

2022ರ‌ ಸಾಲಿನ ಐಪಿಎಲ್ ಪಂದ್ಯಾವಳಿ ಬಹುತೇಕ ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ನಡೆಯೋದು ಬಹುತೇಕ ಖಚಿತ. ಮುಂದಿನ ಸಾಲಿನ ಐಪಿಎಲ್ ಹೊಸತನದಿಂದ ಕೂಡಿರಲಿದೆ‌. ಐಪಿಎಲ್ ಗೆ ಹೆಚ್ಚುವರಿ ಆಗಿ ಕನಿಷ್ಠ ಇನ್ನೆರಡು ತಂಡಗಳು ಸೇರ್ಪಡೆ ಆಗೋದು ಬಹುತೇಕ ಖಚಿತ.‌ ಮಾತ್ರವಲ್ಲ ಆಟಗಾರರ ಮಹಾ ಹರಾಜು ನಡೆಯಲಿದ್ದು, ಇನ್ನಷ್ಟು ಹೊಸ ಮುಖಗಳ ಸೇರ್ಪಡೆ ಖಚಿತ ಎನ್ನಲಾಗುತ್ತಿದೆ.

ಐಪಿಎಲ್ ನಲ್ಲಿ ಈ ಬಾರಿ ಒಟ್ಟು 8 ತಂಡಗಳು ಭಾಗಿ ಆಗಿವೆ. ಮುಂಬವರು ಋತುವಿನಲ್ಲಿ ಇನ್ನಷ್ಟು ತಂಡಗಳು ಸೇರ್ಪಡೆಯಾಗಲಿವೆ. ಪ್ರಮುವಾಗಿ ಕೋಲ್ಕತ್ತಾ ಮೂಲದ ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಪ್, ಅಹಮದಾಬಾದ್ ನ ಅದಾನಿ ಗ್ರೂಪ್,  ಹೈದರಾಬಾದ್ ಮೂಲದ ಅರಬಿಂದೋ ಫಾರ್ಮ ಲಿಮಿಟೆಡ್ ಮತ್ತು ಗುಜರಾತ್ ಮೂಲದ ಟೊರೆಂಟ್ ಗ್ರೂಪ್ ಐಪಿಎಲ್ ಸೇರ್ಪಡೆಗೆ ಆಸಕ್ತಿ ತೋರಿಸಿವೆ. ಈಗಾಗಲೇ ಎರಡು ತಂಡಗಳಿಗೆ ಬಿಡ್ಡಿಂಗ್ ನಡೆಯಲಿದೆ.

ಐಪಿಎಲ್ ಗೆ ಹೊಸ ತಂಡಗಳ ಸೇರ್ಪಡೆಯ ಹಿನ್ನೆಲೆಯಲ್ಲಿ‌‌ ಆಟಗಾರರ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ಫ್ರಾಂಚೈಸಿ ನಾಲ್ಕು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಇದರಲ್ಲಿ ಗರಿಷ್ಠ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ವಿದೆ. ಬಹುತೇಕ ಆಟಗಾರರು ತಂಡದಲ್ಲಿ ಉಳಿದುಕೊಳ್ಳುವ ಬದಲು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಆಸಕ್ತಿ ತೋರಿಸುತ್ತಿ ದ್ದಾರೆ. ತಂಡದಲ್ಲಿ ಉಳಿದು

Comments are closed.