ರಾಬರ್ಟ್ ಗೆ ತೆಲುಗು ಸಂಕಷ್ಟ…! ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆಹೋದ ಚಿತ್ರತಂಡ…!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆಲುಗು ವರ್ಸನ್ ರಿಲೀಸ್ ಗೆ ಎದುರಾಗಿರುವ ಸಂಕಷ್ಟ ಬಗೆಹರಿಸುವಂತೆ ಚಿತ್ರತಂಡ ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆ ಹೋಗಿದೆ.

ನಟ ದರ್ಶನ್, ಚಿತ್ರದ ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರತಂಡದ ಹಲವರು ವಾಣಿಜ್ಯ ಮಂಡಳಿಗೆ ತೆರಳಿ ಮನವಿ ಮಾಡಿದ್ದಾರೆ.ಇದೇ ವೇಳೆ ರಾಬರ್ಟ್ ತೆಲುಗು ವರ್ಸನ್ ರಿಲೀಸ್ ಗೆ ಎದುರಾಗಿರುವ ಸಮಸ್ಯೆ ಬಗ್ಗೆ ನಿರ್ಮಾಪಕ ಉಮಾಪತಿ ವಾಣಿಜ್ಯ ಮಂಡಳಿಗೆ ಪತ್ರದಲ್ಲಿ ವಿವರಿಸಿದ್ದಾರೆ.

ಜನವರಿಯಲ್ಲಿ ತೆಲಂಗಾಣದಲ್ಲಿ ರಾಬರ್ಟ್ ತೆಲುಗು ವರ್ಸನ್ ರಿಲೀಸ್ ಬಗ್ಗೆ ಏಶಿಯನ್ ಸುನೀಲ್ ಜೊತೆ ಮಾತುಕತೆ ನಡೆದಿತ್ತು. ಈ ವೇಳೆ ಏಶಿಯನ್ ಸುನೀಲ್ ಚಿತ್ರ ಬಿಡುಗಡೆಗೆ ಸಮ್ಮತಿ ಸೂಚಿಸಿದ್ದರು.ಆಂಧ್ರಪ್ರದೇಶದ ಥಿಯೇಟರ್ ಗಳಲ್ಲಿ ರಾಬರ್ಟ್ ಬಿಡುಗಡೆಗೆ ಸುರೇಶ್ ಬಾಬು ಪ್ರೊಡಕ್ಷನ್ ನ ಜಗದೀಶ್ ಮಾರ್ಚ್ ೧೧ ರಂದು ರಾಬರ್ಟ್ ರಿಲೀಸ್ ಗೆ ಒಪ್ಪಿದ್ದರು.

ಆದರೆ ಕೊರೋನಾ ಬಳಿಕ ತೆಲುಗು ಚಲನಚಿತ್ರ ಮಂಡಳಿ ಸಿನಿಮಾ ಕಲಾವಿದರು ಹಾಗು ಸಿನಿಮಾ ಎಳ್ಗೆಗಾಗಿ ತೆಲುಗು ಚಿತ್ರಗಳು ರಿಲೀಸ್ ಆಗುವ ದಿನ ಬೇರೆ ಭಾಷೆಯ ಚಿತ್ರಗಳಿಗೆ ಅವಕಾಶ ನೀಡದಿರುವ ನಿರ್ಧಾರ ಕೈಗೊಂಡಿದೆ.

ಹೀಗಾಗಿ ರಾಬರ್ಟ್ ಬಿಡುಗಡೆ ನಿಗದಿಯಾದ ದಿನ ಬೇರೆ ತೆಲುಗು ಚಿತ್ರಗಳ ರಿಲೀಸ್ ಇರೋದರಿಂದ ಚಾಲೆಂಜಿಂಗ್ ಸ್ಟಾರ್ ಚಿತ್ರಕ್ಕೆ ಟಾಲಿವುಡ್ ತಡೆ ಒಡ್ಡುತ್ತಿದೆ. ಹೀಗಾಗಿ ಏಶಿಯನ್ ಸುನೀಲ್ ರಾಬರ್ಟ್ ಚಿತ್ರತಂಡಕ್ಕೆ ಸಿನಿಮಾ ರಿಲೀಸ್ ಸಾಧ್ಯವಿಲ್ಲ ಎಂದಿದ್ದು ಇದು  ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ ನಿರ್ಮಾಪಕ ಉಮಾಪತಿ ಮಂಡಳಿಗೆ ಪತ್ರ ಬರೆದಿದ್ದು ರಾಬರ್ಟ್ ರನ್ನು ಕನ್ನಡ ವರ್ಸನ್ ಜೊತೆಯೆ ತೆಲುಗು ವರ್ಸನ್ ಬಿಡುಗಡೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ. ಚಲನಚಿತ್ರ ಮಂಡಳಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ‌ ಮಾತನಾಡಿದ ನಟ ದರ್ಶನ್, ನನ್ನದು 50 ಸಿನಿಮಾ ಆಗಿದೆ. ನನಗಾಗಿ ನಾನು ಪ್ರಶ್ನಿಸುತ್ತಿಲ್ಲ.ಆದರೆ ನಾವೆಲ್ಲ ಪ್ರಶ್ನಿಸೋದನ್ನು ಬಿಟ್ಟರೇ ಹೊಸಬರ ಚಿತ್ರಗಳಿಗೆ ಸಂಕಷ್ಟ ಕಾದಿದೆ ಎಂದಿದ್ದಾರೆ.

Comments are closed.