ಮನಪಾ ಚುನಾವಣೆ : ಮೇಯರ್ ಆಗಿ ದಿವಾಕರ್, ಉಪಮೇಯರ್ ಆಗಿ ವೇದಾವತಿ ಆಯ್ಕೆ ಸಾಧ್ಯತೆ

0

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇಂದು ನಡೆಯಲಿದೆ. ಪಾಲಿಕೆ ಚುನಾವಣೆ ನಡೆದು ಮೂರು ತಿಂಗಳ ಬಳಿಕ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಮೈಸೂರು ವಿಭಾಗೀಯ ಆಯುಕ್ತರರ ನೇತೃತ್ವದಲ್ಲಿ ಪಾಲಿಕೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಎಗೆ ಮೀಸಲಾಗಿದ್ರೆ, ಉಪಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. 60 ಸದಸ್ಯ ಬಲದ ಪಾಲಿಕೆಯಲ್ಲಿ 44 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಗದ್ದುಗೆ ಏರಲಿದೆ. ಕಂಟೋನ್ಮೆಂಟ್ ವಾರ್ಡ್ ನಿಂದ ಜಯಗಳಿಸಿದ್ದ ಬಿಜೆಪಿಯ ದಿವಾಕರ ಪಾಂಡೇಶ್ವರ ಮೇಯರ್ ಹಾಗೂ ಕುಳಾಯಿ ವಾರ್ಡಿನಿಂದ ಜಯಗಳಿಸಿದ್ದ ವೇದಾವತಿ ಉಪಮೇಯರ್ ಆಗಿ ಆಯ್ಕೆಯಾಗೋದು ಬಹುತೇಕ ಖಚಿತ.

Leave A Reply

Your email address will not be published.