‘ರಾಬರ್ಟ್’ ಚಿತ್ರಕ್ಕೆ ಕೊರೊನಾ ಎಫೆಕ್ಟ್

0

ವಿಶ್ವವನ್ನೇ ನಡುಗಿಸಿರುವ ಕೊರೊನಾ ವೈರಸ್ ಎಫೆಕ್ಟ್ ಇದೀಗ ಚಿತ್ರರಂಗಕ್ಕೂ ತಟ್ಟಿದೆ. ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಗೂ ಕೊರೊನಾ ವೈರಸ್ ಭೀತಿ ಉಂಟಾಗಿದೆ.

ರಾಬರ್ಟ್ ಚಿತ್ರದ ಬಹುತೇಕ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಎಪ್ರಿಲ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ ಚಿತ್ರತಂಡ. ಆದ್ರೀಗ ಕೆಲ ಹಾಡುಗಳ ಚಿತ್ರೀಕರಣ ಬಾಕಿ ಉಳಿದಿತ್ತು. ವಿದೇಶಕ್ಕೆ ತೆರಳಿ ಹಾಡುಗಳ ಶೂಟ್ ಮಾಡೋ ಪ್ಲಾನ್ ಹಾಕಿಕೊಂಡಿತ್ತು.

ಉಮಾಪತಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರೋ ರಾಬರ್ಟ್ ಬಹುನಿರೀಕ್ಷಿತ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಅರ್ಜುನ್ ಜನ್ಯಾ ಮ್ಯೂಸಿಕ್ ಮೋಡಿ ಮಾಡಿದ್ದು, ಶೀಘ್ರದಲ್ಲಿಯೇ ಆಡಿಯೋ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ. ಆದ್ರೀಗ ಕೊರೊನಾ ವೈರಸ್ ಭೀತಿಯಿಂದಾಗಿ ಸ್ಪೇನ್ ಗೆ ತೆರಳಿ ಶೂಟಿಂಗ್ ಮಾಡೋದು ಚಿತ್ರತಂಡಕ್ಕೆ ಸವಾಲಿನ ಕೆಲಸ.

ಹೀಗಾಗಿ ಚಿತ್ರ ತಂಡ ಸ್ಪೇನ್ ಬದಲು ಬೇರೆಡೆ ತೆರಳಿ ಹಾಡುಗಳ ಶೂಟಿಂಗ್ ಮಾಡೋದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದೆ.

ರಾಬರ್ಟ್ ಚಿತ್ರದ ಲುಕ್, ಟೀಸರ್, ಪೋಸ್ಟರ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ ಎಪ್ರಿಲ್ 9ಕ್ಕೆ ಚಿತ್ರ ತೆರೆಕಾಣಲಿದೆ.

Leave A Reply

Your email address will not be published.