ಕೊರೊನಾ ಎಫೆಕ್ಟ್; ನೆಲಕಚ್ಚಿದ ಸೆನ್ಸೆಕ್ಸ್, 5 ಲಕ್ಷ ಕೋಟಿ ನಷ್ಟ !

0

ಮುಂಬೈ : ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೊನಾ ವೈರಸ್ ಭೀತಿ ಇದೀಗ ಹಲವು ರಾಷ್ಟ್ರವನ್ನು ಕಾಡುತ್ತಿದೆ. ಕೊರೊನಾ ವೈರಸ್ ಕೇವಲ ಆರೋಗ್ಯದ ಮೇಲಷ್ಟೇ ಅಲ್ಲಾ, ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಅದ್ರಲ್ಲೂ ಕೊರೊನಾ ವೈರಸ್ ಭಾರತೀಯ ಶೇರು ಮಾರುಕಟ್ಟೆಗೆ ಭಾರಿ ಹೊಡೆತ ನೀಡಿದ್ದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ ಮತ್ತು ನಿಫ್ಟಿ ತೀವ್ರ ಕುಸಿತ ಕಂಡಿದೆ.

ಬಿಎಸ್​ಇ ಸೆನ್ಸೆಕ್ಸ್ 1,100.27 ಅಂಕ (ಶೇ. 2.77) ಇಳಿಕೆಗೊಂಡು 38,645 ಮಟ್ಟ ತಲುಪಿದೆ. ಇನ್ನು ಎನ್​ಎಸ್​ಇ ನಿಫ್ಟಿ ಶೇ.2.83ರಷ್ಟು ಇಳಿಕೆ ಕಂಡಿದೆ. ನಿಫ್ಟಿ 329.50 ಪಾಯಿಂಟ್ ಕುಸಿತ ಕಂಡು 11,303.80 ಮಟ್ಟ ತಲುಪಿದೆ. ಬಜೆಟ್ ಆಸುಪಾಸಿನ ದಿನಗಳಲ್ಲಿ ಸೆನ್ಸೆಕ್ಸ್ 40 ಸಾವಿರ ಅಂಕಗಳ ಗಡಿದಾಟಿ ಹೋಗಿತ್ತು. ಇದೀಗ ನಿರಂತರ ಕುಸಿತ ಕಾಣುತ್ತಿದೆ.

ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಷೇರುಪೇಟೆಯಲ್ಲಿ ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಇನ್​ಫೋಸಿಸ್, ಮಹೀಂದ್ರ ಅಂಡ್ ಮಹೀಂದ್ರ, ಬಜಾಜ್ ಫೈನಾನ್ಸ್, ಹೆಚ್​ಸಿಎಲ್ ಟೆಕ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗುತ್ತಿವೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿರುವ ಹೂಡಿಕೆದಾರರು ಸುಮಾರು 5 ಲಕ್ಷ ಕೋಟಿ ರೂಪಾಯಿ ಹಣ ನಷ್ಟ ಮಾಡಿಕೊಂಡಿದ್ಧಾರೆ ಎಂದು ಅಂದಾಜಿಸಲಾಗುತ್ತಿದೆ.

Leave A Reply

Your email address will not be published.