ಕಟ್ಟಡ ಕಾಮಗಾರಿ ವೇಳೆ ದುರಂತ : ಮಂಗಳೂರಲ್ಲಿ ಇಬ್ಬರು ಕಾರ್ಮಿಕರ ಸಾವು

0

ಮಂಗಳೂರು : ಕಟ್ಟಡ ಕಾಮಗಾರಿ ನಡೆಯುವ ವೇಳೆಯಲ್ಲಿ ಭೂಕುಸಿತ ಉಂಟಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ನಡೆದಿದೆ.

ಉದ್ಯಮಿ ಎ.ಜೆ.ಶೆಟ್ಟಿ ಅವರಿಗೆ ಸೇರಿದ ಜಾಗದಲ್ಲಿ ಕಟ್ಟಡ ಕಾಮಗಾರಿ ನಡೆಸಲಾಗುತ್ತಿತ್ತು.

ಈ ವೇಳೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಭೂ ಕುಸಿತ ಉಂಟಾಗಿತ್ತು. ಮಣ್ಣಿನಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂಧಿ ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟಡದ ಮಣ್ಣಿನಡಿಯಲ್ಲಿ ಇನ್ನೂ ಓರ್ವ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಹಳೆಯ ಕಟ್ಟಡವಾಗಿದ್ದರಿಂದಾಗಿ ಕಾರ್ಮಿಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಕಾಮಗಾರಿ ನಡೆಸೊದಕ್ಕೆ ಮುಂದಾಗಿದ್ದು ಘಟನೆಗೆ ಕಾರಣವೆನ್ನಲಾಗುತ್ತಿದೆ.

Leave A Reply

Your email address will not be published.