ಚುನಾವಣಾ ಕಣಕ್ಕಿಳಿದ ಕಣ್ಣೇ ಅದಿರಿಂದಿ ಗಾಯಕಿ…! ಮಸ್ಕಿಯಲ್ಲಿ ಮಂಗಳವಾದ ಮಂಗ್ಲಿ ಹವಾ…!!

ರಾಯಚೂರು: ಕನ್ನಡದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ನ ಕಣ್ಣೇ ಅದಿರಿಂದಿ ಹಾಡಿನಿಂದ ರಾತ್ರಿ ಬೆಳಗಾಗುವುದರೊಳಗೆ ಸಂಗೀತ ಪ್ರಿಯರ ಮನೆಮಾತಾದ ಗಾಯಕಿ ಮಂಗ್ಲಿ. ಇಂತಿಪ್ಪ ಮಂಗ್ಲಿ ಪ್ರಸಿದ್ಧಿಗೆ ಬರುತ್ತಿದ್ದಂತೆ ಚುನಾವಣಾ ಕಣಕ್ಕಿಳಿದಿದ್ದಾರೆ. ಅರೇ ಆಗಲೆ ಚುನಾವಣೆಗೆ ಸ್ಪರ್ಧಿಸಿದ್ರಾ ಅಂತ ಕೇಳಬೇಡಿ. ಮಂಗ್ಲಿ ಬರ್ತಿರೋದು ಪ್ರಚಾರಕ್ಕೆ.

ತೆಲುಗು ಭಾಷೆಯ ಫೇಮಸ್ ಗಾಯಕಿ ಮಂಗ್ಲಿ ಮಂಗಳವಾರ ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಪರ ಪ್ರಚಾರಕೈಗೊಳ್ಳಲಿರುವ ಮಂಗ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಸ್ಕಿ ಕ್ಷೇತ್ರದಾದ್ಯಂತ ಸಂಚಾರ ನಡೆಸಲಿರುವ ಮಂಗ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಮತಯಾಚನೆ  ಮಾಡಲಿದ್ದಾರೆ. ಏಪ್ರಿಲ್ 17 ರಂದು ಬೆಳಗಾವಿ,ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಪ್ರತಾಪ್ ಗೌಡ್ ಪಾಟೀಲ್ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಮನೆಯಲ್ಲೇ ಐಸೋಲೇಶನ್ ನಲ್ಲಿ ಇದ್ದಾರೆ. ಮೂರು ಪಕ್ಷದ ಅಭ್ಯರ್ಥಿಗಳ ಪರ ಘಟಾನುಘಟಿಗಳು ಪ್ರಚಾರ ನಡೆಸಿದ್ದು, ಬಿಜೆಪಿ ಪರ ಮಂಗ್ಲಿ ಮತಯಾಚನೆ ಮಾಡುವ ಮೂಲಕ ಚುನಾವಣೆಗೆ ಸಿನಿಟಚ್ ನೀಡಲಿದ್ದಾರೆ.

ರಾಬರ್ಟ್ ಸಿನಿಮಾದ ಕಣ್ಣೆಅದಿರಿಂದಿ ಹಾಡು ಹಿಟ್ ಆದ ಬಳಿಕ ಮಂಗ್ಲಿಗೆ ಸಖತ್ ಬೇಡಿಕೆ ಹೆಚ್ಚಿದ್ದು, ಮೊನ್ನೆಯಷ್ಟೇ ಮಂಗ್ಲಿ ಕನ್ನಡ ಕರಿಯಾ ಆಯ್ ಲವ್ ಯೂ ಸಿನಿಮಾದ ಹಾಡಿಗೆ ಧ್ವನಿಯಾಗೋ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

Comments are closed.