Master card : ಗ್ರಾಹಕರ ಸೇರ್ಪಡೆ ಮಾಡದಂತೆ ಮಾಸ್ಟರ್‌ ಕಾರ್ಡ್‌ ಗೆ ಆರ್‌ಬಿಐ ನಿರ್ಬಂಧ

ನವದಹೆಲಿ : ತಂತ್ರಾಂಶ ಸಂಗ್ರಹಣೆ ಮತ್ತು ಸಂಗ್ರಹಣಾ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರ್ಬಂಧ ವಿಧಿಸಿದೆ.

ಮಾಸ್ಟರ್‌ ಕಾರ್ಡ್‌ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ 2018ರಲ್ಲಿಯೇ ಆರ್‌ಬಿಐ ಸುತ್ತೋಲೆ ಯನ್ನು ಹೊರಡಿಸಿತ್ತು. ಎಲ್ಲಾ ಸಿಸ್ಟಮ್‌ ಪಾವತಿದಾರರು ಭಾರತದಲ್ಲಿ ಪಾವತಿ ಡೇಟಾವನ್ನು ಸಂಗ್ರಹಿಸು ತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದ ಪೇಮೆಂಟ್‌ ಎಕೋ ಸಿಸ್ಟಮ್‌ನಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಬಂದಿದೆ. ಅಂತ ವ್ಯವಸ್ಥೆಗಳು ಹೆಚ್ಚು ತಂತ್ರಜ್ಞಾನವನ್ನು ಅವಲಂಭಿತವಾಗಿದೆ.

ಹೀಗಾಗಿ ಸುರಕ್ಷತೆ ಮತ್ತು ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ ಮಾಸ್ಟರ್‌ ಕಾರ್ಡ್‌ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಪಾವತಿ ಮತ್ತು ತೀರುವಳಿ ವ್ಯವಸ್ಥೆ ಕಾಯ್ದೆ 2007 (ಪಿಎಸ್‌ಎಸ್ ಕಾಯ್ದೆ) ಸೆಕ್ಷನ್ 17ರ ಅಡಿಯಲ್ಲಿ ಆರ್‌ಬಿಐಗೆ ಇರುವ ಅಧಿಕಾರವನ್ನು ಚಲಾಯಿಸಿ ಕಠಿಣ ಕ್ರಮವನ್ನು ಕೈಗೊಂಡಿದೆ.

ಮಾಸ್ಟರ್‌ ಕಾರ್ಡ್‌ ಪ್ರಮುಖವಾಗಿ ಪಿಎಸ್‌ಎಸ್‌ ಕಾಯ್ದೆಯಡಿಯಲ್ಲಿ ದೇಶದಲ್ಲಿ ಕಾರ್ಡ್‌ ನೆಟ್‌ವರ್ಕ್‌ ನಿರ್ವಹಿಸಲು ಅಧಿಕಾರವನ್ನುಹೊಂದಿರುವ ಪಾವತಿ ವ್ಯವಸ್ಥೆಯಾಗಿದೆ. ಇದೀಗ ನಿರ್ಬಂಧವನ್ನು ಹೇರಿಕೆ ಮಾಡಿರುವ ಹಿನ್ನೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಗಳನ್ನು ನೀಡುವಂತಿಲ್ಲ. ಈ ನಿಷೇಧದ ಆದೇಶ ಜುಲೈ 22 ರಿಂದ ಜಾರಿಗೆ ಬರುತ್ತಿದೆ.

ಭಾರತದ ಕೇಂದ್ರೀಯ ಬ್ಯಾಂಕ್ ಅಮೆರಿಕನ್ ಎಕ್ಸ್‌ಪ್ರೆಸ್ (ಎಎಕ್ಸ್‌ಪಿಎನ್)ಮತ್ತು ಡಿಸ್ಕವರ್ ಫೈನಾನ್ಷಿಯಲ್ ಸರ್ವೀಸಸ್ (ಡಿಎಫ್‌ಎಸ್.ಎನ್) ಒಡೆತನದ ಡೈನರ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಅನ್ನು ಇದೇ ರೀತಿಯ ಉಲ್ಲಂಘನೆಯಿಂದಾಗಿ ಹೊಸ ಕಾರ್ಡ್‌ಗಳನ್ನು ನೀಡುವುದನ್ನು ನಿರ್ಬಂಧಿಸಿದ ಮೂರು ತಿಂಗಳ ನಂತರ ಈ ಕ್ರಮವು ಬಂದಿದೆ.

ಹೊಸ ಗ್ರಾಹಕರಿಗೆ ಮಾತ್ರವೇ ಆರ್ ಬಿಐ ನಿರ್ಬಂಧವನ್ನು ವಿಧಿಸಿದೆ, ಆದರೆ ಹಳೆಯ ಗ್ರಾಹಕರಿಗೆ ಮಾಸ್ಟರ್‌ ಕಾರ್ಡ್‌ ಸೌಲಭ್ಯ ಎಂದಿನಂತೆಯೇ ಮುಂದುವರಿಯಲಿದೆ.

Comments are closed.