Mayank Agarwal : ಅಜ್ಜ-ಅಜ್ಜಿ ಆಶೀರ್ವಾದ ಪಡೆದು ಐಪಿಎಲ್ ಅಖಾಡಕ್ಕೆ ಕಾಲಿಟ್ಟ ಮಯಾಂಕ್ ಅಗರ್ವಾಲ್

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ನಾಯಕ, ಟೀಮ್ ಇಂಡಿಯಾದ ಟೆಸ್ಟ್ ಓಪನರ್ ಮಯಾಂಕ್ ಅಗರ್ವಾಲ್ (Mayank Agarwal) ಐಪಿಎಲ್ ಸವಾಲಿಗೆ ರೆಡಿಯಾಗಿದ್ದಾರೆ. ಐಪಿಎಲ್-16 (IPL 2023) ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲಿರುವ ಮಯಾಂಕ್ ಅಗರ್ವಾಲ್ ತಮ್ಮ ಹೊಸ ಫ್ರಾಂಚೈಸಿ ತಂಡವನ್ನು ಸೇರಿಕೊಳ್ಳಲು ಹೊರಟಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್’ಗೆ ಹೊರಡುವ ಮುನ್ನ ಮನೆಯಲ್ಲಿ ಅಜ್ಜ ಮತ್ತು ಅಜ್ಜಿಯ ಆಶೀರ್ವಾದ ಪಡೆದಿದ್ದಾರೆ.

ಮಯಾಂಕ್ ಅಗರ್ವಾಲ್ ಅವರ ಅಜ್ಜಿ ಮೊಮ್ಮಗನ ಹಣೆಗೆ ತಿಲಕವಿಟ್ಟು, ಸಿಹಿ ತಿನ್ನಿಸಿ ಬೀಳ್ಕೊಟ್ಟಿದ್ದಾರೆ. ಈ ಚಿತ್ರಗಳನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಮಯಾಂಕ್ ‘’ಅಜ್ಜ-ಅಜ್ಜಿ ಆಶೀರ್ವಾದ ಪಡೆದು ಐಪಿಎಲ್ ಆಡಲು ತೆರಳುತ್ತಿದ್ದೇನೆ’’ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ (Mayank Agarwal IPL 2023) ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 8.25 ಕೋಟಿ ರೂ’ಗಳಿಗೆ ಖರೀದಿಸಿತ್ತು. ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದ ಮಯಾಂಕ್, 14 ಪಂದ್ಯಗಳಲ್ಲಿ ಪಂಜಾಬ್’ಗೆ ಏಳು ಗೆಲುವುಗಳನ್ನು ತಂದುಕೊಟ್ಟಿದ್ದರು. ಆದರೆ ಪ್ಲೇ ಆಫ್ ಪ್ರವೇಶಿಸುವಲ್ಲಿ ಪಂಜಾಬ್ ವಿಫಲವಾಗಿತ್ತು. ಇದನ್ನೂ ಓದಿ : David Warner : ಮುಂಬೈನ ಬೀದಿಯಲ್ಲಿ ಕ್ಯಾಬ್ ಡ್ರೈವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಡೇವಿಡ್ ವಾರ್ನರ್, ಫೋಟೋ ವೈರಲ್

ನಾಯಕತ್ವದ ಒತ್ತಡ ಮಯಾಂಕ್ ಅಗರ್ವಾಲ್ ಅವರ ಆಟದ ಮೇಲೆ ಪರಿಣಾಮ ಬೀರಿದ ಕಾರಣ ಬ್ಯಾಟಿಂಗ್’ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಮಯಾಂಕ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ರಿಲೀಸ್ ಮಾಡಿತ್ತು. ಇದೀಗ ಸನ್ ರೈಸರ್ಸ್ ಹೈದರಾಬಾದ್ ಪರ ಆಡಲು ಸಿದ್ಧರಾಗಿರುವ ಮಯಾಂಕ್ ಅಗರ್ವಾಲ್ ಐಪಿಎಲ್’ನಲ್ಲಿ (IPL 2023) ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 31 ವರ್ಷದ ಬಲಗೈ ಬ್ಯಾಟರ್ ಮಯಾಂಕ್ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ರೈಸಿಂಗ್ ಪುಣೆ, ಪಂಜಾಬ್ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ.

ಇದನ್ನೂ ಓದಿ : Royal Challengers Bangalore : ವಿಲ್ ಜೇಕ್ ಬದಲು ಆರ್’ಸಿಬಿ ಟೀಮ್ ಸೇರಲಿದ್ದಾನೆ ಕಿವೀಸ್’ನ ಸ್ಫೋಟಕ ಆಲ್ರೌಂಡರ್

ಇದನ್ನೂ ಓದಿ : KL Rahul – Venkatesh Prasad : ಅವಮಾನ ಮಾಡಿದವನಿಂದಲೇ ರಾಹುಲ್’ಗೆ ಸನ್ಮಾನ, ಟೀಕಾಕಾರರಿಗೆ ಆಟದಿಂದಲೇ ಉತ್ತರಿಸಿದ ಕನ್ನಡಿಗ

Comments are closed.