ಸೋಮವಾರ, ಏಪ್ರಿಲ್ 28, 2025
HomeBreakingMeditation : ಒತ್ತಡ ನಿಭಾಯಿಸಲು ಧ್ಯಾನ ಮಾಡುವುದೇ ಬೆಸ್ಟ್‌; ಹೇಗೆ ಅಂತೀರಾ ಇಲ್ಲಿದೆ ಓದಿ

Meditation : ಒತ್ತಡ ನಿಭಾಯಿಸಲು ಧ್ಯಾನ ಮಾಡುವುದೇ ಬೆಸ್ಟ್‌; ಹೇಗೆ ಅಂತೀರಾ ಇಲ್ಲಿದೆ ಓದಿ

- Advertisement -

ಇವತ್ತಿನ ಧಾವಂತದ ಬದುಕಿನಲ್ಲಿ ಒತ್ತಡ, ಆತಂಕಗಳು ಹೆಚ್ಚು. ಇದರಿಂದ ಹಲವರು ಅಧಿಕ ರಕ್ತದೊತ್ತಡದ (Hypertension) ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರ ಮಾನಸಿಕ ಆರೋಗ್ಯವೂ ಹದಗೆಡುತ್ತಿದೆ. ಇದನ್ನು ನಿಭಾಯಿಸಲು ಅನೇಕ ತಂತ್ರಜ್ಞಾನಗಳು ಬಂದಿದ್ದರೂ ಸಹ ಅವು ಸ್ವಲ್ಪ ಮಟ್ಟಿಗೆ ಮಾತ್ರ ಒತ್ತಡ ಕಡಿಮೆ ಮಾಡಬಲ್ಲದು. ಸಮರ್ಪಕವಾಗಿ ಒತ್ತಡವನ್ನು ನಿಭಾಯಿಸಲು ಉತ್ತಮ ಮಾರ್ಗ ಧ್ಯಾನ (Meditation). ಪ್ರತಿದಿನ ಮಾಡುವ ಧ್ಯಾನ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂಬುದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ.

ಅಮೇರಿಕನ್ ಹಾರ್ಟ್‌ ಅಸೋಸಿಯೇಷನ್‌, ಹೈಪೆರ್‌ಟೆನ್ಷನ್‌ ಎಂಬ ನಿಯತಕಾಲಿಕದಲ್ಲಿ ಹೇಳಿರುವ ಪ್ರಕಾರ ಸಂಶೋಧನೆಗಳಿಂದ ತಿಳಿದು ಬಂದಿರುವುದೇನೆಂದರೆ ಧ್ಯಾನವು ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಒತ್ತಡವು ಮಾನಸಿಕ ಆರೋಗ್ಯದ ಮೇಲೆ ಬದಲಾವಣೆಯನ್ನು ಮಾಡಿ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಧ್ಯಾನವು ಚಿಂತೆಯನ್ನು ನಿಯಂತ್ರಿಸುತ್ತದೆ. ಇದರಿಂದ ಅನೇಕ ಪ್ರಯೋಜನಗಳು ಇವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Red Eyes : ಕಣ್ಣು ಕೆಂಪಾಗಿ ನೋವಾಗುತ್ತಿದೆಯೇ; ಅದಕ್ಕೆ ಈ 5 ಕಾರಣಗಳಿರಬಹುದು; ಎಚ್ಚರ

ಇದನ್ನೂ ಓದಿ : Yoga For Anti-aging : ವಯಸ್ಸಿನ ಕಳೆ ಮರೆಮಾಚಲು ಈ ಐದು ಯೋಗಾಸನಗಳನ್ನು ತಪ್ಪದೇ ಮಾಡಿ.

ಸಂಶೋಧನೆಯ ಪ್ರಕಾರ ಧ್ಯಾನ ಅಥವಾ ವಿಶ್ರಾಂತಿಯು (Relax) ರಕ್ತನಾಳಗಳು ವಿಸ್ತರಿಸುವಂತೆ ಮಾಡುತ್ತದೆ. ಇದರಿಂದ ರಕ್ತನಾಳಗಳಲ್ಲಿನ ಉರಿಯೂತ ಮತ್ತು ಸಂಕೋಚನವನ್ನು ಸಹ ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದವರು ಧ್ಯಾನದಿಂದ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಸಂಶೋಧನೆ ಹೇಳುತ್ತದೆ.

ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ರಾಸಾಯನಿಕಗಳು ರಕ್ತನಾಳಗಳ ವಿಶ್ರಾಂತಿ ಮತ್ತು ಹಿಗ್ಗುವಿಕೆಗೆ ಸಹಾಯ ಮಾಡುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಎಂಟು ವಾರಗಳ ಕಾಲ ಧ್ಯಾನದ ಅಭ್ಯಾಸ ಮಾಡಿದವರಲ್ಲಿ ಒತ್ತಡವು ನಿಯಂತ್ರಣಕ್ಕೆ ಬಂದಿರುವುದು ಕಂಡುಬಂದಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆರೋಗ್ಯಕರವಾಗಿರುವ ಕಾರಣಕ್ಕೆ ವೈದ್ಯರು ಕೂಡ ಧ್ಯಾನ ಮಾಡುವ ಸಲಹೆ ನೀಡುತ್ತಿದ್ದಾರೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಧ್ಯಾನ ವಿದೇಶಗಳಲ್ಲಿಯೂ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ : Iodine Deficiency : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

(Meditation plays an important role to reduce hypertension)

RELATED ARTICLES

Most Popular