Nirmala Sitharaman: ಎಷ್ಟಮ್ಮ ಆಲೂಗಡ್ಡೆ..? ಮಾರ್ಕೆಟ್ ನಲ್ಲಿ ಖುದ್ದು ತರಕಾರಿ ಖರೀದಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಚೆನ್ನೈ : Nirmala Sitharaman ರಾಜಕಾರಣಿಗಳು, ಸೆಲೆಬ್ರೆಟಿಗಳು, ಸಾಮಾನ್ಯ ಜನರಂತೆ ಅಲ್ಲಿ ಇಲ್ಲಿ ಓಡಾಡೋದೇ ಇಲ್ಲ. ಇನ್ನೂ ಮಾರ್ಕೆಟ್ ಗೆ ಹೋಗಿ ತರಕಾರಿ ತರೋದಂತೂ ದೂರದ ಮಾತು.. ಇಂಥಹದ್ದರಲ್ಲಿ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾವೇ ತರಕಾರಿ ಮಾರು ಕಟ್ಟೆಗೆ ಹೋಗಿ ಖುದ್ದು ತಾವೇ ತರಕಾರಿಯನ್ನ ಆಯ್ಕೆ ಮಾಡಿಕೊಂಡು ಮನೆಗೆ ತರಕಾರಿ ತೆಗೆದುಕೊಂಡು ಹೋಗಿದ್ದಾರೆ. ಅಬ್ಬಬ್ಬ  ಹಣಕಾಸು ಸಚಿವೆ ಹೀಗೂ ಮಾಡಬಹುದು ಅಂತಾ ಅಚ್ಚರಿ ಅನಿಸಿದರೂ ಇದು ನಿಜ.

ತರಕಾರಿ ಮಾರ್ಕೆಟ್ ಗೆ ಹೋಗಿರೋ ವಿಡಿಯೋವನ್ನ ನಿರ್ಮಲಾ ಸೀತಾರಾಮನ್ ಅವರ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗಿದೆ. ಶನಿವಾರ ತಮಿಳುನಾಡಿನ ಚೆನ್ನೈನ ಮೈಲಾಪುರ ಪ್ರದೇಶದಲ್ಲಿ ಬೀದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸೋ ವಿಡಿಯೋವನ್ನ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ., ಖರೀದಿ ಬಳಿಕ ಕೆಲ ವ್ಯಾಪಾರಸ್ಥರೊಂದಿಗೆ ನಿರ್ಮಲಾ ಸೀತಾರಾಮನ್ ಮಾತುಕತೆ ನಡೆಸಿದ್ದು, ವ್ಯಾಪಾರಸ್ಥರ ಕಷ್ಟವನ್ನೂ ಆಲಿಸಿದ್ದಾರೆ.

ವೀಡಿಯೋದಲ್ಲಿ ನಿರ್ಮಲಾ ಅವರು ಕೆಲ ಸಿಹಿ ಗೆಣಸುಗಳನ್ನು ಖರೀದಿಸಿದ್ದು, ಹಾಗಲಕಾಯಿ ಯನ್ನೂ ಖರೀದಿಸಿರೋ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿದ್ದು, ತರಕಾರಿ ಬೆಲೆಗಳು ಸಹ ಗಗನಕ್ಕೇರುತ್ತಿವೆ. ಇದೇ ವೇಳೆ ಹಣಕಾಸು ಸಚಿವೆಯಾಗಿ ಮಾರುಕಟ್ಟೆಗೆ ಭೇಟಿ ನೀಡಿ ತರಕಾರಿ ಖರೀದಿಸಿರೋದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ನೆಟ್ಟಿಗರು ಏನಂದ್ರು : ನಿರ್ಮಲಾ ಸೀತಾರಾಮನ್ ಅವರ  ತರಕಾರಿ ಖರೀದಿ ಕುರಿತು ನೆಟ್ಟಿಗರು ತಮ್ಮದೇ ಆದ ವಿಶ್ಲೇಷಣೆ ಮತ್ತು ವಿಚಿತ್ರ ಕಮೆಂಟ್ ಗಳನ್ನಮಾಡಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು  ನಿರ್ಮಲಾ ಅವರ  ವಿಡಿಯೋಗೆ ‘ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರೂ ಹಣದುಬ್ಬರವನ್ನ ಹೇಗೆ ನಿಯಂತ್ರಣಕ್ಕೆ ತರಬಹುದು ಅಂತಾ ತಿಳಿದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಸೆಪ್ಟೆಂಬರ್ 20 ರಂದು ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ದಾಸ್ ಅವರು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಗ್ರಾಹಕರ ಬೆಲೆ ಹಣದುಬ್ಬರವು “ಸುಮಾರು 7.4 ಶೇಕಡಾ ಹೆಚ್ಚುತ್ತಿದೆ” ಎಂದು ಹೇಳಿದರು. ಆಹಾರ ಮತ್ತು ತರಕಾರಿ ಬೆಲೆ ಮತ್ತಷ್ಟು ಏರಿದರೆ ಅದು ಆರ್ಥಿಕ ಅಪಾಯ ಎಂದು ಬಹುರಾಷ್ಟ್ರೀಯ ಹಣಕಾಸು ಸಂಸ್ಥೆ ಡಾಯ್ಚ ಬ್ಯಾಂಕ್‌ನ ವರದಿ ಹೇಳಿತ್ತು.

ನಿಷೇಧಿತ ಪ್ಲ್ಯಾಸ್ಟಿಕ್ ಬ್ಯಾಗ ಬಳಕೆ : ಇನ್ನು ನಿರ್ಮಲಾ ಸೀತಾರಾಮನ್ ಅವರು ತರಕಾರಿ ಖರೀದಿಸಿದ್ರೆ ಅವರ ಪಕ್ಕದಲ್ಲೇ ನಿಂತಿದ್ದ ಅವರ ಅಂಗರಕ್ಷಕ ನಿರ್ಮಲಾ ಖರೀದಿಸಿದ ತರಕಾರಿಯನ್ನ ನಿಷೇಧಿತ ಪ್ಲ್ಯಾಸ್ಟಿಕ್ ಬ್ಯಾಗ್ ನಲ್ಲಿ ಹಿಡಿದು ನಿಂತಿದ್ರು. ಈ ಕುರಿತು ಪ್ರತಿಕ್ರಿಯೆ ನೀಡಿರೋ ಕೆಲ ನೆಟ್ಟಿಗರು, ಸಾಮಾನ್ಯ ಜನರು ಪ್ಲ್ಯಾಸ್ಟಿಕ್ ಬ್ಯಾಗ್ ಬಳಸಿದ್ರೆ ದಂಡ ವಿಧಿಸುತ್ತಾರೆ ಅಂತಾ ವಾಸ್ತವವನ್ನ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : David Miller daughter : ಕ್ಯಾನ್ಸರ್’ಗೆ ಬಲಿಯಾದ ಡೇವಿಡ್ ಮಿಲ್ಲರ್ ಪುತ್ರಿ, ಭಾವನಾತ್ಮಕ ಸಂದೇಶ ಹಂಚಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

Nirmala Sitharaman on Saturday shared a video of her buying vegetables from a street vendor

Comments are closed.