ಮುಟ್ಟಿನ ದಿನಗಳು(Menstrual Health) ಅಂದರೆ ಮಹಿಳೆಯರ ಪಾಲಿಗೆ ಕಷ್ಟದ ದಿನಗಳು ಎಂದು ಹೇಳಿದರೆ ತಪ್ಪಾಗಲಾರದು. ಹೊಟ್ಟೆ ನೋವು, ರಕ್ತಸ್ರಾವ, ಮೋಡ್ ಸ್ವಿಂಗ್ಸ್ ಹೀಗೆ ನಾನಾ ಸಮಸ್ಯೆಗಳಿಂದ ಮಹಿಳೆಯು ಬಲಳುವ ಕಾಲವಿದೆ. ಈ ಸಂದರ್ಭದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳವುದರ ಜೊತೆಗೆ ಸ್ವಚ್ಛತೆಯನ್ನು ಕೂಡ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.ಋತುಚಕ್ರದ ಸಂದರ್ಭದಲ್ಲಿ ಕೆಲ ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳ ಪಟ್ಟಿ ಇಲ್ಲಿದೆ ನೋಡಿ :
ಯೋನಿಯ ಅತಿಯಾದ ಶುಚಿಗೊಳಿಸುವಿಕೆ :
ಯೋನಿಯನ್ನು ಸ್ವಚ್ಛಗೊಳಿಸಲು ಕೇವಲ ನೀರು ಮಾತ್ರ ಸಾಲುವುದಿಲ್ಲ. ಹೀಗಾಗಿ ಅನೇಕ ಮಹಿಳೆಯರು ಸಾಬೂನು ಹಾಗೂ ಶವರ್ ಜೆಲ್ಗಳನ್ನು ಬಳಕೆ ಮಾಡಿಬಿಡುತ್ತಾರೆ. ಆದರೆ ಇವುಗಳಲ್ಲಿ ಇರುವ ರಾಸಾಯನಿಕಗಳು ಯೋನಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು. ಹೀಗಾಗಿ ನೀವು ಯಾವುದರಿಂದ ಯೋನಿಯನ್ನು ಸ್ವಚ್ಛಗೊಳಿಸುತ್ತೀರಾ ಎಂಬುದು ಅತ್ಯಂತ ಮುಖ್ಯವಾಗಿದೆ.
ನೋವುನಿವಾರಕ ಮಾತ್ರೆಗಳ ಸೇವನೆ:
ಮುಟ್ಟಿನ ಸಂದರ್ಭದಲ್ಲಿ ಅನೇಕರು ನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಾರೆ. ನೀವು ಈ ರೀತಿ ಮಾಡುತ್ತಿದ್ದರೆ ಮೊದಲು ಈ ಅಭ್ಯಾಸವನ್ನು ಬಿಟ್ಟುಬಿಡಿ. ಮುಟ್ಟಿನ ಸಂದರ್ಭದಲ್ಲಿ ಸೇವಿಸುವ ನೋವು ನಿವಾರಕ ಮಾತ್ರೆಗಳು ದೇಹದಲ್ಲಿನ ಒಳ್ಳೆಯ ಬಾಕ್ಟೀರಿಯಾಗಳನ್ನು ನಾಶಮಾಡಿಬಿಡುತ್ತದೆ. ಇದರಿಂದ ಮೂತ್ರಪಿಂಡ, ಯಕೃತ್ತು ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡಿಬಿಡಬಹುದು. ನಿಮಗೆ ಅತಿಯಾದ ನೋವಿದ್ದರೆ 2 ಲವಂಗ ಹಾಗೂ 2 ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. ಇದರಿಂದ ನಿಮಗೆ ಹಿತ ಎನಿಸಲಿದೆ. ಬಿಸಿ ನೀರಿನ ಬಳಕೆ ಕೂಡ ಒಳ್ಳೆಯದು.
ಸ್ಯಾನಿಟರಿ ಪ್ಯಾಡ್ಗಳನ್ನು ಕಾಲ ಕಾಲಕ್ಕೆ ಬದಲಾವಣೆ ಮಾಡದಿರುವುದು :
ಇದು ಮಹಿಳೆಯರು ಮಾಡುವ ಅತ್ಯಂತ ಸಾಮಾನ್ಯ ತಪ್ಪುಗಳಲ್ಲಿ ಮೊದಲನೆಯದಾಗಿದೆ. ಅತೀ ಹೆಚ್ಚು ಸಮಯಗಳ ಕಾಲ ಒಂದೇ ನ್ಯಾಪ್ಕಿನ್ ಬಳಕೆ ಮಾಡುವುದರಿಂದ ಯೋನಿಗೆ ಗಾಳಿಯ ಸಂಚಾರ ನಿಲ್ಲುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ. ಇದು ಯೋನಿಯಲ್ಲಿ ಸೋಂಕು ಅಥವಾ ಅಲರ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಪ್ರತಿ ಮೂರು ಗಂಟೆಗೆ ಪ್ಯಾಡ್ನ್ನು ಬದಲಾಯಿಸಿ.
Menstrual Health: THESE mistakes made by women during periods can be harmful
ಇದನ್ನು ಓದಿ : almond with honey benefits : ಬಾದಾಮಿ ಹಾಗೂ ಜೇನುತುಪ್ಪ ಸೇವನೆ ಹಿಂದಿದೆ ಆರೋಗ್ಯದ ಗುಟ್ಟು
ಇದನ್ನೂ ಓದಿ: turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ..!