Brother Marries His Own Sister : ಈ ಕಾರಣಕ್ಕೆ ತನ್ನ ಸ್ವಂತ ಸಹೋದರಿಯನ್ನೇ ಮದುವೆಯಾದ ಭೂಪ..!

ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಬೇಕು ಅಂದರೆ ಕೆಲ ಜನರು ಯಾವುದೇ ಸುಳ್ಳನ್ನು ಹೆಣೆಯಲೂ ಸಹ ಸಿದ್ಧರಿರ್ತಾರೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಫಿರೋಜಾಬಾದ್​ ಎಂಬಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಸಾಮಾಜಿಕ ಕಲ್ಯಾಣ ಇಲಾಖೆಗಳಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಕಾರ್ಯಕ್ರಮದಡಿಯಲ್ಲಿ ನೀಡಲಾಗುವ ಹಣವನ್ನು ಪಡೆದುಕೊಳ್ಳುವ ಸಲುವಾಗಿ ಭೂಪನೊಬ್ಬ ತನ್ನ ಸ್ವಂತ ಸಹೋದರಿಯನ್ನೇ(Brother Marries His Own Sister) ವಿವಾಹವಾದ ನಾಟಕವಾಡಿದ್ದಾನೆ..!


ಸಾಮೂಹಿಕ ವಿವಾಹ ಯೋಜನೆಯ ಅಡಿಯಲ್ಲಿ ಉತ್ತರ ಪ್ರದೇಶ ಸರ್ಕಾರವು ಪ್ರತಿ ದಂಪತಿಗೆ ಗೃಹೋಪಯೋಗಿ ವಸ್ತುಗಳ ಜೊತೆಯಲ್ಲಿ 35 ಸಾವಿರ ರೂಪಾಯಿ ಧನಸಹಾಯ ಮಾಡುತ್ತದೆ. ಯೋಜನೆಯ ಅಡಿಯಲ್ಲಿ ವಧುವಿನ ಹೆಸರಿನಲ್ಲಿ 20 ಸಾವಿರ ರೂಪಾಯಿ ಹಾಗೂ ವರನ ಬ್ಯಾಂಕ್​ ಖಾತೆಗೆ 10 ಸಾವಿರ ರೂಪಾಯಿಯನ್ನು ಜಮೆ ಮಾಡಲಾಗುತ್ತದೆ.


ಡಿಸೆಂಬರ್​ 11ರಂದು ಫಿರೋಜಾಬಾದ್​ನ ತುಂಡ್ಲಾದಲ್ಲಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತ್ತು. ಸ್ಥಳೀಯರು ಈ ದಂಪತಿಯನ್ನು ಒಡಹುಟ್ಟಿದವರು ಎಂದು ಗುರುತಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಯಕ್ರಮದ ವಿಡಿಯೋ ಹಾಗೂ ಫೋಟೋಗಳನ್ನು ಪ್ರಸಾರ ಮಾಡಿದ ನಂತರ ಗ್ರಾಮಸ್ಥರು ದಂಪತಿ ಇವರು ಸಹೋದರ ಹಾಗೂ ಸಹೋದರಿ ಎಂದು ಹೇಳಿದ್ದಾರೆ. ಈ ವೇಳೆಯಲ್ಲಿ ಇವರ ಕಳ್ಳಾಟ ಬಟಾಬಯಲಾಗಿದೆ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಯೋಜನೆಯ ಲಾಭವನ್ನು ಪಡೆಯಲು ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಕಳೆದ ವರ್ಷ ಪಂಜಾಬ್​ನಲ್ಲಿಯೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗಬೇಕೆಂದು ಸಹೋದರನೇ ತನ್ನ ಸಹೋದರಿಯನ್ನು ಮದುವೆಯಾಗಿದಗದ. ಮನ್​ಪ್ರೀತ್​ ಸಿಂಗ್​ ಎಂಬಾತ 2012ರಿಂದ ಹುಟ್ಟೂರು ಭತಿಂದಾ ಗ್ರಾಮದಿಂದ ಆಸ್ಟ್ರೇಲಿಯಾಗೆ ತೆರಳಿ ಅಲ್ಲೇ ಸೆಟಲ್​ ಆಗಿದ್ದ. ಆತನ ಸಹೋದರಿ ಅಮಂದೀಪ್​ ಕೌರ್​ ಕೂಡ ಆಸ್ಟ್ರೇಲಿಯಾಗೆ ತೆರಳುವ ಆಸೆ ಹೊಂದಿದ್ದಳು. ಆದರೆ ಆಕೆಯ ವೀಸಾ ತಿರಸ್ಕೃತಗೊಂಡಿತ್ತು. ಹೀಗಾಗಿ ನಕಲಿ ಮದುವೆ ನಾಟಕವಾಡಿ ಇವರು ಆಸ್ಟ್ರೇಲಿಯಾ ತೆರಳುವ ಪ್ಲಾನ್​ ಮಾಡಿದ್ದರು.

Bhaiya Bane Saiyyan? Brother Marries His Own Sister to Obtain Money From a Govt Scheme!

ಇದನ್ನು ಓದಿ : Pet Dog Died :ಪೊಲೀಸರ ವಿರುದ್ಧ ಸಾಕು ನಾಯಿ ಕೊಂದ ಆರೋಪ ಹೊರಿಸಿದೆ ಈ ಕುಟುಂಬ..!

ಇದನ್ನೂ ಓದಿ : Manaohari gold tea : ಬರೋಬ್ಬರಿ 99,999 ರೂಪಾಯಿಗೆ ಮಾರಾಟವಾಯ್ತು ಮನೋಹರಿ ಟೀ ಪುಡಿ..!

Comments are closed.