ಕೊರೋನಾ ಲಸಿಕೆ ಪಡೆದ ಮೆಗಾಸ್ಟಾರ್ ಸೊಸೆ…! ಸೋಷಿಯಲ್ ಮೀಡಿಯಾದಲ್ಲಿ ಮಹತ್ವದ ಸಂದೇಶ ಕೊಟ್ಟ ಉಪಾಸನಾ…!!

ವಾಕ್ಸಿನ್ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳುತ್ತಿರುವ ಹೊತ್ತಿನಲ್ಲೇ ಸೆಲೆಬ್ರೆಟಿಗಳು ಲಸಿಕೆ ಪಡೆದು ಸಮಾಜಕ್ಕೆ ಸಂದೇಶ ನೀಡಲಾರಂಭಿಸಿದ್ದಾರೆ. ಇದೀಗ  ಈ ಸಾಲಿಗೆ ಮೆಗಾ ಸ್ಟಾರ್ ಸೊಸೆ ಹೊಸ ಸೇರ್ಪಡೆ.

ಮೆಗಾಸ್ಟಾರ್  ಸೊಸೆ ಹಾಗೂ ನಟ ರಾಮ್ ಚರಣ್ ತೇಜಾ ಪತ್ನಿ ಉಪಾಸನಾ ಕೊರೋನಾ ಲಸಿಕೆ ಪಡೆದುಕೊಂಡಿದ್ದು, ವಾಕ್ಸಿನ್ ಪಡೆಯಲು ಹಿಂಜರಿಕೆ ಬೇಡ. ಸುರಕ್ಷತೆಗಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚಿಗಷ್ಟೇ ನಟ ರಾಮ್ ಚರಣ್ ತೇಜಾ ಕೊರೋನಾಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಉಪಾಸನಾ ಕೋನಿದೇಲ್ ಕೂಡ ಹೋಂ ಕ್ವಾರಂಟೈನ್ ಆಗಿದ್ದರು. ಈಗ ರಾಮ್ ಚರಣತೇಜಾ ಚೇತರಿಸಿಕೊಂಡಿದ್ದು, ಆರ್.ಆರ್.ಆರ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಪತಿ ಚೇತರಿಸಿಕೊಂಡು ಶೂಟಿಂಗ್ ಗೆ ಮರಳಿದ ಬಳಿಕ ಉಪಾಸನಾ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಪಡೆದುಕೊಂಡಿದ್ದಾರೆ. ತಾವು ಲಸಿಕೆ ಪಡೆದ ಪೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರೋ ಉಪಾಸನಾ, ಕೊರೋನಾ ಭೀತಿಯಿಂದ ಅನುಭವಿಸುವ ಮಾನಸಿಕ ಯಾತನೆಯಿಂದ ಬಿಡುಗಡೆ ಪಡೆಯಲು ಈ ಲಸಿಕೆ ಸಹಾಯಕ ಎಂದು ಅಭಿಪ್ರಾಯಿಸಿದ್ದಾರೆ.

ತಾವೇ ಸ್ವತಃ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದ ಪೋಟೋಗಳನ್ನು ಹಂಚಿಕೊಂಡಿರುವ ಉಪಾಸನಾ. ಲಸಿಕೆ ಪಡೆಯಲು ಹಿಂಜರಿಯಬೇಡಿ ಎಂದಿದ್ದಾರೆ.

ಅಲ್ಲದೇ ತಮ್ಮ ಸಿಬ್ಬಂದಿಗೂ ಲಸಿಕೆ ಪಡೆಯಲು ಸೂಚಿಸಿದ್ದಾರಂತೆ. ಅಲ್ಲದೇ ಉಪಾಸನಾ ಲಸಿಕೆ ಪಡೆಯುತ್ತಿರುವ ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ  ಕ್ಲಿಕ್ಕಿಸಿದ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.

Comments are closed.