ಸೋಮವಾರ, ಏಪ್ರಿಲ್ 28, 2025
HomeBreakingMysore: ಕೊನೆಗೂ ಅನ್ ಲಾಕ್ ಆಗ್ತಿದೆ ಮೈಸೂರು….! ಸೋಮವಾರದಿಂದ ಸಂಚರಿಸಲಿದೆ ಕೆಎಸ್ಆರ್ಟಿಸಿ ಬಸ್….!!

Mysore: ಕೊನೆಗೂ ಅನ್ ಲಾಕ್ ಆಗ್ತಿದೆ ಮೈಸೂರು….! ಸೋಮವಾರದಿಂದ ಸಂಚರಿಸಲಿದೆ ಕೆಎಸ್ಆರ್ಟಿಸಿ ಬಸ್….!!

- Advertisement -

ಕೊರೋನಾ ಎರಡನೇ ಅಲೆಗೆ ಅಕ್ಷರಷಃ ನಲುಗಿ ಹೋಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ ಪ್ರಸ್ತುತ 8. 16 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಸೋಮವಾರದಿಂದ ಮೈಸೂರಿನಲ್ಲಿ ಹಲವು ಸೇವೆಗಳು ಆರಂಭವಾಗಲಿದ್ದು, ಬೆಂಗಳೂರಿನಿಂದ ಮೈಸೂರಿಗೆ ಕೆಎಸ್ಅರ್ಟಿಸಿ ಬಸ್ ಸಂಚರಿಸಲಿದೆ.

ಕಳೆದ ಎರಡು ತಿಂಗಳಿನಿಂದ ಮೈಸೂರಿಗೆ ಬೆಂಗಳೂರಿನಿಂದ ಸರ್ಕಾರಿ ಬಸ್ ಗಳು ಸಂಚರಿಸಿರಲಿಲ್ಲ. ಕೆಲ ದಿನಗಳ ಹಿಂದೆ ರಾಜ್ಯದಾದ್ಯಂತ ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ಮೈಸೂರಿನಲ್ಲಿ ಪಾಸಿಟಿವಿಟಿ  ರೇಟ್ ಹೆಚ್ಚಿದ್ದರಿಂದ ಕಠಿಣ ನಿಯಮಗಳನ್ನು ಮುಂದುವರೆಸಲಾಗಿತ್ತು.

ಸತತವಾಗಿ ಮೈಸೂರಿನಲ್ಲಿ ಕೊರೋನಾ ಪ್ರಕರಣಗಳನ್ನು ಇಳಿಕೆಯಾಗಿರೋದರಿಂದ ಜಿಲ್ಲಾಢಳಿತ ಹಲವು ನಿರ್ಬಂಧಗಳನ್ನು ಸಡಿಲಿಸಿದೆ. ಹೀಗಾಗಿ ಸೋಮವಾರದಿಂದ ಮೈಸೂರಿನಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುವ ಸಾಧ್ಯತೆ ಇದೆ.

ಇದರ ಬೆನ್ನಲ್ಲೇ ಕರ್ನಾಟಕ ಸಾರಿಗೆ ಇಲಾಖೆ ಕೂಡ ಮೈಸೂರಿಗೆ ತನ್ನ ಬಸ್ ಗಳನ್ನು ಓಡಿಸಲು ನಿರ್ಧರಿಸಿದ್ದು, ಬೇಡಿಕೆ ಆಧರಿಸಿ ಶೇಕಡಾ 50 ರಷ್ಟು ಆಸನ ವ್ಯವಸ್ಥೆ ಜೊತೆ ಕೆಎಸ್ಆರ್ಟಿಸಿ ಬಸ್ ಗಳು ಮೈಸೂರಿಗೆ ಪ್ರಯಾಣಿಸಲಿವೆ.

ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳು ರಸ್ತೆಗಿಳಿದಿದ್ದು, ಸಂಚರಿಸುತ್ತಿವೆ.

RELATED ARTICLES

Most Popular