ಸರಕಾರಿ ನೌಕರರಿಗೆ ಗುಡ್ ನ್ಯೂಸ್ : NPS ನೌಕರರಿಗೂ ಹಳೆ ಪೆನ್ಶನ್ ಜಾರಿ

1

ನವದೆಹಲಿ : ದೇಶದಾದ್ಯಂತ ಎನ್ ಪಿಎಸ್ ರದ್ದು ಪಡಿಸಿ ಹಳೆ ಪೆನ್ಶನ್ ವ್ಯವಸ್ಥೆ ಜಾರಿ ಮಾಡುವಂತೆ ಸರಕಾರಿ ನೌಕರರು ಆಗ್ರಹಿಸುತ್ತಿದ್ದಾರೆ. ಈ ನಡುವಲ್ಲೇ ಕೇಂದ್ರ ಸರಕಾರ ಹೊಸದಾಗಿ ಹುದ್ದೆಗೆ ಸೇರಿದ ಸರಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ.

2004ರ ಜನವರಿ 1ರ ಮೊದಲೇ ಕೆಲಸಕ್ಕೆ ಸೇರಿಕೊಂಡಿದ್ದರೂ ಕೂಡ ತಾಂತ್ರಿಕ ಕಾರಣಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಲಕ್ಷಾಂತರ ನೌಕರರು ಹಳೆ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ತಾಂತ್ರಿಕ ಕಾರಣಗಳಿಂದಾಗಿ ಪಿಂಚಣಿ ವ್ಯವಸ್ಥೆಗಳ ಒಳಪಟ್ಟಿರದ ನೌಕರರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿಯನ್ನು ಕೊಟ್ಟಿದ್ದು, ಹಳೆ ಪಿಂಚಣಿ ವ್ಯವಸ್ಥೆ ಪಡೆಯಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ.

ಕೇಂದ್ರ ಸರಕಾರದ ಹೊಸ ಆದೇಶದಿಂದಾಗಿ 2004ರ ಮೊದಲೇ ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ಕೆಲಸಕ್ಕೆ ಸೇರಿದವರು, 2004ರ ಮೊದಲೇ ಹುದ್ದೆಗೆ ಆಯ್ಕೆಯಾಗಿದ್ದರೂ ಕೂಡ ವಿಳಂಭವಾಗಿ ನೇಮಕಾತಿ ಆದೇಶ ಪಡೆದವರು. ಹಾಗೂ ರಾಜ್ಯ ಸರಕಾರಿ ಹುದ್ದೆಗೆ ರಾಜೀನಾಮೆ ನೀಡಿ ಕೇಂದ್ರದ ಹುದ್ದೆಗೆ ಆಯ್ಕೆಯಾದವರಿಗೂ ಕೂಡ ಅನುಕೂಲವಾಗಲಿದೆ.

ಸರಕಾರಿ ನೌಕರರಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗಿದ್ದು, ನಿಯಮಾನುಸಾರ ಅರ್ಜಿಯನ್ನು ಸಲ್ಲಿಸಿ ಹಳೆ ಪಿಂಚಣಿ ವ್ಯವಸ್ಥೆಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸಿಬ್ಬಂಧಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಆದೇಶ ಹೊರಡಿಸಿದೆ.

1 Comment
  1. D C Walikar says

    2006 mele rajya sarkari noukarige appointment aadavarigu ee soulabhya ideya?

Leave A Reply

Your email address will not be published.